ಐವರಿಗೆ ಐದು ಕೋಟಿ ನಾಮ ಹಾಕಿದ 'ಎನ್ಆರ್ಐ' ಸುಂದರಿ

NRI beauty dupes 5 Indians
ಫಿರೋಜ್‌ಪುರ (ಪಂಜಾಬ್), ಮೇ. 30 : ಈಕೆ ಬಾಲಿವುಡ್ ಚಿತ್ರನಟಿಯರನ್ನು ನಿವಾಳಿಸಿ ಎಸೆಯುವಂತಹ 30 ವರ್ಷದ ಸುರಸುಂದರಾಂಗಿ. ನಾಟಕ ಆಡುವುದರಲ್ಲಿ, ವಿದೇಶ ವಾಸದ ಕನಸು ಕಾಣುವವರನ್ನು ಬಲೆಗೆ ಬೀಳಿಸುವುದರಲ್ಲಿ ಬಲೆ ನಿಸ್ಸೀಮಳು. ಅನಿವಾಸಿ ಎಂದು ಹೇಳಿಕೊಂಡು ಐವರನ್ನು ಪಿಗ್ಗಿ ಬೀಳಿಸಿ, ಐದು ಕೋಟಿ ರು. ವಂಚಿಸಿ ಈಗ ಪಂಜಾಬ್ ಪೊಲೀಸರ ಅತಿಥಿಯಾಗಿದ್ದಾಳೆ.

ಆಕೆಯ ಹೆಸರು ರಾಜ್ವಿಂದರ್ ಕೌರ್. ಆಕೆಯ ಮೋಸದ ಬಲೆಗೆ ಬಿದ್ದು ದೊಡ್ಡ ಮೊತ್ತದ ಹಣ ಕಳೆದುಕೊಂಡಿರುವ ಆಕೆಯ ಗಂಡನೇ ಆಕೆಯ ವಿರುದ್ಧ ದೂರು ನೀಡಿದ್ದ. ತನ್ನ ಸೋದರನೊಂದಿಗೆ ಕಂಬಿ ಎಣಿಸುತ್ತಿರುವ ರಾಜ್ವಿಂದರ್ ತನ್ನ ಮೋಸದ ಬಲೆಗೆ ಬೀಸಿ ಐವರಿಂದ ಬಾಚಿಕೊಂಡಿದ್ದು ಭರ್ತಿ ಐದು ಕೋಟಿ ರು.ಗಳನ್ನು.

ತಾನು ಕೆನಡಾ ನಿವಾಸಿಯಾಗಿರುವ ಎನ್ಆರ್ಐ ಎಂದು ಹೇಳಿಕೊಂಡು ರಾಜ್ವಿಂದರ್ ಮೊದಲು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು ಸ್ವಂತ ತನ್ನ ಗಂಡ ಕುಲ್ವಿಂದರ್ ಸಿಂಗ್‌ನನ್ನು. ಆತನನ್ನು ಮದುವೆಯಾಗುವ ಮೊದಲು ವಿದೇಶಕ್ಕೆ ಕಳಿಸಲು ಸಹಾಯ ಮಾಡುತ್ತೇನೆಂದು ಆತನಿಂದಲೇ ಮೊದಲಿಗೆ 10 ಲಕ್ಷ ರು. ಗೆಬರಿಕೊಂಡಿದ್ದಾಳೆ. ರೊಕ್ಕದ ರುಚಿ ಕಂಡ ಕೌರ್, ಗಂಡನ ಸ್ನೇಹಿತರು ಮತ್ತು ಸಂಬಂಧಿಗಳನ್ನು ಕೂಡ ಬಿಟ್ಟಿಲ್ಲ.

ಅವರಿಗೆ ಕೂಡ ಕೆನಡಾದ ಏರೋಪ್ಲೇನ್ ಹತ್ತಿರುವುದಾಗಿ ನಂಬಿಸಿ, ಒಬ್ಬೊಬ್ಬರಿಂದಲೂ ಒಂದೊಂದು ಕೋಟಿ ಬಾಚಿಕೊಂಡು, ಆಕಾಶಕ್ಕೆ ಏಣಿ ಹಾಕಿ ಅವರೆಲ್ಲರನ್ನು ಹತ್ತಿಸಿ ಅಲ್ಲಿಂದ ತಳ್ಳಿಬಿಟ್ಟಿದ್ದಾಳೆ. ಹಣ ಕೈಗೆ ಬರುತ್ತಿದ್ದಂತೆ ಥೈಲ್ಯಾಂಡಿಗೆ ಪರಾರಿಯಾಗಿದ್ದಾಳೆ. ಕೊನೆಗೆ ಗಂಡ ಕುಲ್ವಿಂದರ್ ಬೀಸಿದ ಬಲೆಗೆ ತಾನೇ ಬಿದ್ದಿದ್ದಾಳೆ.

ಆಕೆಯ ಜೊತೆ ಸಹೋದರನಾದ ಹರದಯಾಳ್ ಸಿಂಗ್, ಜಗಸಿರ್ ಸಿಂಗ್‌ರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅವರಿಂದ 19.5 ಲಕ್ಷ ರು. ನಗದು, ಒಂದಿಷ್ಟು ವಿದೇಶಿ ನಗದು, ಆಭರಣಗಳು, ಬೇರೆ ಬೇರೆಯವರ ಹೆಸರಲ್ಲಿರುವ ನಕಲಿ ಪಾರ್ಸೋರ್ಟ್, ಎಟಿಎಂ ಕಾರ್ಡ್, ಮೂರು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇವಳ ಕಥೆ ಇಲ್ಲಿಗೇ ಮುಗಿಯುವುದಿಲ್ಲ. ಜಗತ್ ಮೋಸಗಾರ್ತಿಯಾಗಿರುವ ರಾಜ್ವಿಂದರ್ ವಿರುದ್ಧ ಸಾಕಷ್ಟು ಪ್ರಕರಣಗಳು ಈಗಾಗಲೆ ದಾಖಲಾಗಿವೆ. 2005ರಿಂದ 2010ರವರೆಗೆ ಅನೇಕರನ್ನು ತಾನು ವಿದೇಶಿ ಎಂದು ಹೇಳಿ, ಮದುವಣಗಿತ್ತಿಯಂತೆ ಪೋಸ್ ನೀಡಿ, ಮದುವೆಯಾಗುವುದಾಗಿ ನಂಬಿಸಿ ಕೋಟಿಗಟ್ಟಲೆ ವಂಚಿಸಿದ್ದಾಳೆ. ಆಕೆಯ ವಿರುದ್ಧ ಅರ್ಧ ಡಜನ್‌ಗೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+