NRI: ಪಾಶ್ಚಿಮಾತ್ಯ ಬಟ್ಟೆಯುಟ್ಟ ಗರ್ಭಿಣಿ ಪತ್ನಿ ಹತ್ಯೆ

ದುರ್ದೈವಿ ಗರ್ಭಿಣಿಯು ಭಾರತೀಯ ಸಂಸ್ಕೃತಿಗೆ ತಿಲಾಂಜಲಿಯಿಟ್ಟಿದ್ದೇ 37 ವರ್ಷದ ಅನಿವಾಸಿ ಭಾರತದ ಪತಿರಾಯನ ಕೋಪಕ್ಕೆ ಮೂಲವಾಯಿತು. ಕುಲಬೀರ್ ಸಿಂಗ್ ಎಂಬ ಈ 'ಪುರುಷೋತ್ತಮ'ನು 27 ವರ್ಷದ ಕೌರ್ ಬಲ್ ವಿಂದೆ ಹೆಸರಿನ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾನೆ.
ನಂತರ 'ಶವವನ್ನು ಪೋ ನದಿಗೆ ಎಸೆದೆ. ಭಾರತೀಯ ಸಂಪ್ರದಾಯ ಬಿಟ್ಟುಕೊಟ್ಟಿದ್ದೇ ಆಕೆಯ ಮಾಡಿದ ಮಹಾಪರಾಧ' ಎಂದೂ ಈ ಭಾರತೀಯ ಕುಲವೀರ ಪೊಲೀಸರಿಗೆ ತಿಳಿಸಿದ್ದಾನೆ.
'ಹೌದು, ಆ ಗರ್ಭಿಣಿ ಮಹಿಳೆ Western ಮಾದರಿಯಲ್ಲಿ ಬಟ್ಟೆ ಧರಿಸುತ್ತಿದ್ದಳಂತೆ. ಆಕೆಯನ್ನು ಪತಿರಾಯನೇ ಸಾಯಿಸಿದ್ದಾನೆ. ಆಕೆ ನಾಪತ್ತೆಯಾಗದ 153 ದಿನಗಳ ಬಳಿಕ ಪಿಯಸೆನ್ಜಾ ಬಳಿ ಪೋ ನದಿ ದಡದಲ್ಲಿ ಮೊನ್ನೆ ಭಾನುವಾರ ಶವ ಪತ್ತೆಯಾಗಿದೆ' ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications