ಡಿಎನ್‌ಎ ಟೆಸ್ಟ್: ಕೊನೆಗೂ ತಿವಾರಿ 'ರಕ್ತದಾನ'

ಅಂದಹಾಗೆ, ತಿವಾರಿಯೇ ತನ್ನ ತಂದೆ ಎಂದು ಕೋರ್ಟ್ ಮೊರೆಹೋಗಿರುವ 32 ವರ್ಷದ ರೋಹಿತ್ ಶೇಖರ್ ಮತ್ತು ಆತನ ತಾಯಿ ಉಜ್ವಲ ಶರ್ಮಾ ಅವರು ಈಗಾಗಲೇ ತಮ್ಮ ರಕ್ತದ ಮಾದರಿಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.
ಡೆಹ್ರಾಡೂನಿನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾ ನ್ಯಾಯಾಧೀಶ ರಾಜ್ ಕೃಷ್ಣಾ, ಜಿಲ್ಲಾ ಸಿವಿಲ್ ಸರ್ಜನ್ ಬಿ ಸಿ ಪಾಠಕ್, ದೆಹಲಿ ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್ ಹಾಗೂ ಮತ್ತಿತರೆ ವೈದ್ಯರ ತಂಡದ ಮುಂದೆ ತಿವಾರಿ ರಕ್ತದ ಮಾದರಿ ನೀಡಿದರು. ಈ ಸಂದರ್ಭದಲ್ಲಿ, ಅರ್ಜಿದಾರ ರೋಹಿತ್ ಶೇಖರ್ ಮತ್ತು ಆತನ ತಾಯಿ ಉಜ್ವಲ ಶರ್ಮಾ ಅವರು ಸಹ ಉಪಸ್ಥಿತರಿದ್ದರು.
ಮೇ 29ರೊಳಗಾಗಿ ರಕ್ತದ ಮಾದರಿ ನೀಡಬೇಕೆಂದು ಸುಪ್ರೀಂಕೋರ್ಟ್ ಗಡುವು ವಿಧಿಸಿತ್ತು. ಈ ರಕ್ತದ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗೋಪ್ಯವಾಗಿ ಕಳುಹಿಸಬೇಕು ಎಂದು ಕೋರ್ಟ್ ಸೂಚಿಸಿದೆ.












Click it and Unblock the Notifications