ಕಿಂಗ್ ಫಿಷರ್ ಬ್ಯಾಂಕ್ ಖಾತೆ ಮತ್ತೆ ಮುಟ್ಟುಗೋಲು

Vijay Mallya
ಬೆಂಗಳೂರು, ಮೇ.29: ಸಾಲ ತೀರಿಸದೆ ಸಂಕಷ್ಟಕ್ಕೀಡಾಗಿರುವ ವಿಜಯ್ ಮಲ್ಯ ಒಡೆತನದ ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್ ಫಿಷರ್ ಸಂಸ್ಥೆ ಬ್ಯಾಂಕ್ ಖಾತೆಗಳನ್ನು ಮಂಗಳವಾರ(ಮೇ.29) ಮತ್ತೊಮ್ಮೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸಿಎನ್ ಬಿಸಿ-ಟಿವಿ 18 ವರದಿ ಮಾಡಿದೆ.

ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಕಿಂಗ್ ಫಿಷರ್ ಸಂಸ್ಥೆಗೆ 342 ಕೋಟಿ ರು ಬಾಕಿ ಮೊತ್ತವನ್ನು ಕೂಡಲೇ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ಪ್ರತಿ ವಾರ 9 ಕೋಟಿ ರು ಬಾಕಿ ಮೊತ್ತ ನೀಡಬೇಕಾಗಿದ್ದ ಕಿಂಗ್ ಫಿಷರ್ ಸಂಸ್ಥೆ, ಮಾತಿಗೆ ತಪ್ಪಿ ಕೇವಲ 4.5 ಕೋಟಿ ರು ಮಾತ್ರ ಪಾವತಿಸಿದೆ. ಎರಡು ವಾರ 4.5 ಕೋಟಿ ರು ಪಾವತಿಸಿದ ಕಿಂಗ್ ಫಿಷರ್ ಸಂಸ್ಥೆ ನಂತರ ಬಾಕಿ ಹಣ ಪಾವತಿಸುವುದನ್ನು ನಿಲ್ಲಿಸಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಬಗ್ಗೆ ಕಿಂಗ್ ಫಿಷರ್ ವಕ್ತಾರರು ಇನ್ನೂ ಸ್ಪಷ್ಟಣೆ ನೀಡಿಲ್ಲ.

ಮಲ್ಯ ಭರವಸೆ: ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸರ್ಕಾರ ಅನುವು ನೀಡಿದರೆ ಸಾಲದ ಸಮಸ್ಯೆ ತಕ್ಷಣವೆ ತೀರುತ್ತದೆ, ಬಾಕಿ ಮೊತ್ತವನ್ನು ಕೂಡಲೇ ಪಾವತಿಸುತ್ತೇವೆ ಎಂದು ಕಿಂಗ್ ಫಿಷರ್ ಸಂಸ್ಥೆ ಒಡೆಯ ಮಲ್ಯ ಅವರು ಬ್ಯಾಂಕ್ ಗಳಿಗೆ ಹೇಳಿದ್ದರು. ಆದರೆ, ಎಫ್ ಡಿಐ ನಿಯಮಗಳು ಸರ್ಕಾರದ ಕೈಲಿಗೆ ನಮ್ಮ ಕೈಲಿಲ್ಲ. ನೀವು ಬಾಕಿ ಮೊತ್ತ ಕಟ್ಟಿಬಿಡಿ ಎಂದು ಬ್ಯಾಂಕ್ ಗಳು ಮಲ್ಯರಿಗೆ ಉತ್ತರ ನೀಡಿತ್ತು.

Central Board of Excise and Customs ಚೇರ್ಮನ್ ಎಸ್ಕೆ ಗೋಯಲ್ ಅವರು ಕಿಂಗ್ ಫಿಷರ್ ಸಂಸ್ಥೆ ತಿಂಗಳ ಬಾಕಿ ಮೊತ್ತ ಸರಿಯಾಗಿ ಪಾವತಿಸುತ್ತಿದೆ. ಆದರೆ, ಇನ್ನೂ 54 ಕೋಟಿ ಬಾಕಿ ಮೊತ್ತ ಉಳಿಸಿಕೊಂಡಿದೆ ಎಂದು ಇತ್ತೀಚೆಗೆ ಹೇಳಿದ್ದರು.

ಏರ್ ಇಂಡಿಯಾ ಹಾಗೂ ಜೆಟ್ ಏರ್ ವೇಸ್ ಗೆ ಹೋಲಿಸಿದರೆ ಕಿಂಗ್ ಫಿಷರ್ ಸಂಸ್ಥೆಗೆ ಸ್ಟೇಟ್ ಬ್ಯಾಂಕ್ ಗಳು ರಿಯಾಯಿತಿ ನೀಡುತ್ತಿದೆ ಎಂಬ ಮಾತನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚೇರ್ಮನ್ ಪ್ರತೀಪ್ ಚೌಧುರಿ ಅಲ್ಲಗೆಳೆದಿದ್ದಾರೆ.

ಕಿಂಗ್ ಫಿಷರ್ ಒಟ್ಟಾರೆ 7,057.08 ಕೋಟಿ ಸಾಲ ತಲೆ ಮೇಲೆ ಹೊತ್ತುಕೊಂಡಿದೆ. 21,800 ಕೋಟಿ ರೂ ಯುಬಿ ಸಮೂಹದ ಒಡೆಯನಾದ ಮಲ್ಯ ಅವರ ಕೊಂಕಣಿ ಸಮುದಾಯಕ್ಕೆ ಸೇರಿದ ವಿಜಯ್ ಮಲ್ಯರ ಖಾಸಗಿ ಆಸ್ತಿ ಮೊತ್ತ 1.4 ಬಿಲಿಯನ್ ಡಾಲರ್ ಎಂದು ಫೋರ್ಬ್ಸ್ ವರದಿ ಹೇಳುತ್ತದೆ.

ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಶೇ.26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ ಇನ್ನೂ ಕಾರ್ಯಗತವಾಗಿಲ್ಲ. ಇಂಧನ ಆಮದು, ಒನ್ ವರ್ಲ್ಡ್ ಸಮೂಹಕ್ಕೆ ಸೇರ್ಪಡೆ ಸೇರಿದಂತೆ ಹಲವು ಐಡಿಯಾಗಳು ಮಲ್ಯರ ಕಿಂಗ್ ಫಿಷರ್ ಗೆ ಜೀವದಾನ ನೀಡಬಲ್ಲದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+