ಆವಲಹಳ್ಳಿಯಲ್ಲಿ ನರ್ಸ್ ಅತ್ಯಾಚಾರ, ಆರೋಪಿ ಬಂಧನ

ಘಟನೆಯ ವಿವರ: 25 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯ ಮೇಲೆ 31 ವರ್ಷದ ಆಫ್ರಿಕಾದ ಪ್ರಿನ್ಸ್ ಜಾನ್ ಅಲಿಯಾಸ್ ಜಾನ್ ಸನ್ ಅತ್ಯಾಚಾರ ನಡೆಸಿದ್ದ ಎಂದು ಮುಂಬೈ ಪೊಲೀಸರು ಆರೋಪಿಸಿದ್ದರು. ವಾಸ್ತವವಾಗಿ ಈ ಆರೋಪಿಯ ಪ್ರಿಯತಮೆ ಬಾಧಿತ ಯುವತಿಯ ಚಿಕ್ಕಮ್ಮ. ಈಕೆ ಮುಂಬೈನಲ್ಲಿ, ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ. ಬಾಧಿತ ನರ್ಸಿಂಗ್ ವಿದ್ಯಾರ್ಥಿನಿ ಮಣಿಪುರದವರು.
ಚಿಕ್ಕಮ್ಮ ತನ್ನ ಬಾಯ್ ಫ್ರೆಂಡ್ ನನ್ನು ನೋಡಲು ಬಾಧಿತ ಯುವತಿಯ ಜತೆಗೆ ಬೆಂಗಳೂರಿನ ಆವಲಹಳ್ಳಿಗೆ ಬಂದಾಗ... ಮೇ 13ರ ಬೆಳಗಿನ ಜಾವ ಚಿಕ್ಕಮ್ಮ ಇನ್ನೂ ಸವಿ ನಿದ್ದೆಯಲ್ಲಿದ್ದಾಗ...ಆರೋಪಿಯು ಮನೆಯಲ್ಲಿ ನೀರು ಬರುತ್ತಿಲ್ಲ. ಇಲ್ಲೇ ಪಕ್ಕದ ಫ್ಲಾಟಿನಲ್ಲಿ ಸ್ನೇಹಿತನ ಮನೆಯಿಂದ ನೀರು ತಗೊಂಡು ಬರೋಣ ಬಾ ಎಂದು ಬಾಧಿತ ಯುವತಿಯನ್ನು ಕರೆದಿದ್ದಾನೆ.
ಪಾಪ ಆ ಯುವತಿಯು ಯಾವುದೇ ಅನುಮಾನ ವ್ಯಕ್ತಪಡಿಸದೆ ಸಂಕಷ್ಟಕ್ಕೆ ನೆರವಾಗೋಣವೆಂದುಕೊಂಡು ಪ್ರಿನ್ಸ್ ಜಾನ್ ಜತೆಗೂಡಿ ಅದೇ ಫ್ಲಾಟಿನಲ್ಲಿರುವ ಗೆಳೆಯನ ಮನೆಗೆ ಹೋಗಿದ್ದಾರೆ. ಅಲ್ಲಿ ಪ್ರಿನ್ಸ್ ಜಾನ್ ನ ಗೋಮುಖ ಬೆಳಕಿಗೆ ಬಂದಿದೆ. ಗೆಳೆಯನ ಮನೆಯಲ್ಲಿ ಪ್ರಿನ್ಸ್ ಜಾನ್ ಯುವತಿಯ ಮೇಲೆ ರೇಪ್ ಮಾಡಿದ್ದಾನೆ.
ಇದರಿಂದ ನರ್ಸ್ ತೀವ್ರವಾಗಿ ಘಾಸಿಗೊಂಡರು. ರಕ್ತಸ್ರಾವ ಹೆಚ್ಚಾಗಿ ಆಗುತ್ತಿತ್ತು. ಆಗ ಆರೋಪಿಯು ತನಗೆ ಮುಟ್ಟಾಗಿದೆ. ಆದ್ದರಿಂದ ಅತೀವ ರಕ್ತಸ್ರಾವ ವಾಗುತ್ತಿದೆ ಎಂದು ಚಿಕ್ಕಮ್ಮನಿಗೆ ಹೇಳುವಂತೆ ನರ್ಸ್ ಗೆ ಸಲಹೆ ನೀಡಿದ್ದಾನೆ. ಚಿಕ್ಕಮ್ಮನಿಗೆ ಅತ್ಯಾಚಾರ ನಡೆಸಿರುವುದನ್ನು ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದೂ ಬೆದರಿಕೆಯೊಡ್ಡಿದ್ದಾನೆ.
ಗತ್ಯಂತರವಿಲ್ಲದೆ ಯುವತಿ ಅದನ್ನೇ ತನ್ನ ಚಿಕ್ಕಮ್ಮನಿಗೆ ಹೇಳಿದ್ದಾರೆ. ಆದರೆ ಆಕೆ ದೈಹಿಕವಾಗಿ ತೀವ್ರವಾಗಿ ಘಾಸಿಗೊಂಡಿದ್ದರು. ಆರೋಪಿಯು ತನ್ನ ಪ್ರಿಯತಮೆ (ಚಿಕ್ಕಮ್ಮ) ಮತ್ತು ಬಾಧಿತ ನರ್ಸ್ ಗೆ ಎರಡು ವಿಮಾನದ ಟಿಕೆಟುಗಳನ್ನು ಖರೀದಿಸಿ, ಮುಂಬೈಗೆ ವಾಪಸಾಗುವಂತೆ ಆದೇಶಿಸಿದ್ದಾನೆ.
ಹೆಚ್ಚು ವಿಳಂಬ ಮಾಡದೆ ಚಿಕ್ಕಮ್ಮನ ಜತೆಗೂಡಿ ಮುಂಬೈಗೆ ತೆರಳಿದ್ದಾರೆ. ನಾಲ್ಕು ದಿನವಾದರೂ ರಕ್ತಸ್ರಾವ ನಿಂತಿಲ್ಲ. ಆಗ ಮೇ 17ರಂದು ದಕ್ಷಿಣ ಮುಂಬೈನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿಯ ಗುಪ್ತಾಂಗಗಳಿಗೆ ಭಾರಿ ಪೆಟ್ಟು ಬಿದ್ದಿದೆ. ಆಕೆಗೆ ತಕ್ಷಣ ಹೆಚ್ಚಿನ ಚಿಕಿತ್ಸೆ ಬೇಕಾಗಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಆಗ ಅತ್ಯಾಚಾರ ವಿಷಯ ಬಹಿರಂಗವಾಗಿದೆ.
ತಕ್ಷಣ ಸದರಿ ಚಿಕ್ಕಮ್ಮ ಮೊನ್ನೆ ಶನಿವಾರ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಅವರನ್ನು ಸಂಪರ್ಕಿಸಿ, ವಿಷಯ ತಿಳಿಸಿದ್ದಾರೆ. ಸುನಿಲ್ ಕುಮಾರ್ ತಂಡ ಸೋಮವಾರ ಬೆಳಗ್ಗೆ ಆರೋಪಿ ಜಾನ್ ಸನ್ ನನ್ನು ಬಂಧಿಸಿದ್ದಾರೆ.












Click it and Unblock the Notifications