Yahoo! ಭಾರತದಲ್ಲಿ 2000 ಮಂದಿ ನೇಮಕ

'ಪ್ರಸಕ್ತ ಆರ್ಥಿಕ ವರ್ಷದಲ್ಲೇ ಈ ನೇಮಕಾತಿ ನಡೆಯಲಿದೆ. Yahoo! ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ಸಾಕಷ್ಟು ಏರುಪೇರುಗಳನ್ನು ಕಂಡಿದೆ. ವಾಸ್ತವವಾಗಿ Yahoo! ಉಳಿತಾಯ ಮಂತ್ರ ಅಳವಡಿಸಿಕೊಂಡಿದೆಯಾದರೂ ಅದು ಭಾರತದಲ್ಲಿ ಹೆಚ್ಚು ಪ್ರಭಾವ ಬೀರಿಲ್ಲ.
ಆದ್ದರಿಂದ ಸುರಕ್ಷಿತ ವಲಯದಲ್ಲಿರುವ ಭಾರತದ Yahoo! ಸಂಸ್ಥೆಯಲ್ಲಿ ನೇಮಕಾತಿ ಅಬಾಧಿತವಾಗಿ ನಡೆಯಲಿದೆ' ಎಂದು ಇಂಟರ್ನೆಟ್ ಕ್ಷೇತ್ರದ ಅಗ್ರಮಾನ್ಯ ಕಂಪನಿಯ ಉಪಾಧ್ಯಕ್ಷ ಮತ್ತು ಭಾರತದ CEO ಷೌವಿಕ್ ಮುಖರ್ಜಿ ತಿಳಿಸಿದ್ದಾರೆ.
ಅಮೆರಿಕದ ಸನ್ನಿವೇಲ್ ನಲ್ಲಿರುವ Yahoo! ಕಂಪನಿಯ ಮುಖ್ಯ ಕೇಂದ್ರ ಜಾಗತಿಕಮಟ್ಟದಲ್ಲಿ ಅತ್ಯಂತ ದೊಡ್ಡಾಗಿದೆ. ಅದರ ಹೊರತಾಗಿ ಎರಡನೆಯ ದೊಡ್ಡ ಕೇಂದ್ರವೆಂದರೆ ಬೆಂಗಳೂರಿನಲ್ಲಿರುವ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ. ಇಲ್ಲಿ 2,000 ಮಂದಿ ಈಗಾಗಲೇ ಉದ್ಯೋಗಿಗಳಿದ್ದಾರೆ.












Click it and Unblock the Notifications