ಕಿಲ್ಲರ್ ಬಿಎಂಟಿಸಿ ಟೆಕ್ಕಿ ತಲೆಯನ್ನು ಚೆಚ್ಚಿ ಬಿಡ್ತು

ಕೊಯಮತ್ತೂರು ಮೂಲದ ಪಾಲ್ ಜೋಸೆಫ್ (38) ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ರಿಚ್ಮಂಡ್ ರಸ್ತೆ ಸಿಗ್ನಲ್ ನಿಂದ ಹೊರ ಬಿದ್ದ ಪಾಲ್ ಬಸ್ ನಿಂದ ಮುಂದಕ್ಕೆ ಚಲಿಸುವ ಆತುರದಲ್ಲಿ ಆಯ ತಪ್ಪಿ ಬಿದ್ದಿದ್ದಾರೆ.
ಕೆಳಗೆ ಬಿದ್ದ ಟೆಕ್ಕಿ ಪಾಲ್ ಚೇತರಿಸಿಕೊಳ್ಳುವಷ್ಟರಲ್ಲೇ ವೇಗವಾಗಿ ಬರುತ್ತಿದ್ದ ಬಿಎಂಟಿಸಿ ಬಸ್ ಪಾಲ್ ಅವರ ತಲೆ ಮೇಲೆ ಹರಿದುಬಿಟ್ಟಿದೆ. ಹೆಲ್ಮೆಟ್ ಧರಿಸಿದ್ದರು ಪಾಲ್ ಚೆಚ್ಚಿಹೋಗಿತ್ತು ಸ್ಥಳದಲ್ಲೇ ಮೃತಪಟ್ಟರು. ಉಳಿಸಿಕೊಳ್ಳುವ ಯಾವ ಅವಕಾಶವೂ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಅಶೋಕ್ ನಗರ ಸಂಚಾರ ಪೊಲೀಸ್ ಠಾಣಾಧಿಕಾರಿ ಪ್ರಭಾಕರ್ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ತಮಿಳುನಾಡು ಮೂಲದ ಪಾಲ್ ಜೋಸೆಫ್ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ. ಅವರ ಕುಟುಂಬ ವರ್ಗಕ್ಕೆ ಸಾವಿನ ಸುದ್ದಿ ಮುಟ್ಟಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಇನ್ಸ್ ಪೆಕ್ಟರ್ ಪ್ರಭಾಕರ್ ಹೇಳಿದ್ದಾರೆ.












Click it and Unblock the Notifications