ನಿದ್ರೆಗೆ ಜಾರುತ್ತಲೇ ಸಾವಿನ ಮನೆ ತಟ್ಟಿದ ಟೆಕ್ಕಿ

Techie Sriraju
ಟೆಕ್ಕಿ ರಾಜು ವಿಕೃತ ಸಾವಿಗೆ ಮನಸ್ಸು ಮಾಡಿದ್ದು ಏಕೆ? ಸಾವು ಸಂಭವಿಸಿದ್ದಾದರೂ ಹೇಗೆ? ಮುಂದೆ ಓದಿ...

ಟೆಕ್ಕಿ ವಿಕೃತ ಸಾವು: ಸಂಬಂಧಿಕರ ಮನೆಯಿಂದ ಹೊರಬಿದ್ದ ಶ್ರೀರಾಜ್ ಮಧ್ಯರಾತ್ರಿ ನಂತರ 2 ಗಂಟೆ ಸುಮಾರಿಗೆ ತನ್ನ ಪ್ರೇಯಸಿ ಜೆನ್ನಿಫರ್ ಗೆ ಹೀಗೆ ಮೆಸೇಜ್ ಮಾಡಿದ್ದಾನೆ.(ಇಲ್ಲಿರುವುದು ಕನ್ನಡ ಭಾವಾನುವಾದ)

'ಡಿಯರ್ ಗೆಳತಿ, ಇದು ನನ್ನ ಕೊನೆಯ ಮೆಸೇಜ್, ಮುಂದೆ ಯಾವತ್ತೂ ನಾನು ಸಂದೇಶ ಕಳಿಸುವುದಿಲ್ಲ. ಈ ಮೇಲ್ ಮಾಡುವುದಿಲ್ಲ. ನಿನಗೆ ನಿಶ್ಚಯವಾಗಿರುವ ಹುಡುಗನನ್ನು ಮದುವೆಯಾಗಿ ಸುಖವಾಗಿರು. ಬಹುಶಃ ಈ ಮೇಸೆಜ್ ಗೆ ನೀನು ರಿಪ್ಲೈ ಮಾಡದಿದ್ದರೆ ನನ್ನ ಸ್ಥಿತಿ ಏನಾಗಿರುತ್ತದೆ ಎಂಬುದು ನಿನಗೆ ನಾಳಿನ ಪತ್ರಿಕೆಗಳಲ್ಲಿ ಗೊತ್ತಾಗುತ್ತದೆ'

ನಂತರ ಮನೆಯಿಂದ ಹೊರಬಿದ್ದ ಶ್ರೀರಾಜು ಎಲ್ಲಿಗೆ ಹೋದ ಎಂಬುದು ಗೆಳೆಯ ವಿವೇಕ್ ಗೂ ಗೊತ್ತಾಗಲಿಲ್ಲ. ಅಪರ ವೇಳೆಯಲ್ಲಿ ಫೋನ್ ಕಾಲ್ ಬಂದರೆ ಟೆರೇಸ್ ಮೇಲೆ ಹೋಗಿ ರಾಜು ಮಾತಾಡುವುದನ್ನು ನೋಡಿದ ವಿವೇಕ್ ಗೆ ಆತನ ವರ್ತನೆ ವಿಚಿತ್ರ ಎನ್ನಿಸಿರಲಿಲ್ಲ.

ಆದರೆ, ರಾಜು ಫುಲ್ ಫಾರ್ಮಲ್ ಡ್ರೆಸ್ ಹಾಕಿಕೊಂಡು ವೋಕ್ಸ್ ವ್ಯಾಗನ್ ಕಾರು ಹತ್ತಿಕೊಂಡು ಹೊರಟ ರಾಜು, ಮಹದೇವಪುರ ಎಇಸಿಎಸ್ ಲೇಔಟ್ ಬಳಿಯ ಚಿನ್ನಪ್ಪನ ಕೆರೆ ಸಮೀಪ ಕಾರು ನಿಲ್ಲಿಸಿದ್ದಾನೆ. ಬರೋಬ್ಬರಿ 114 ನಿದ್ರಾ ಮಾತ್ರೆ ಸೇವಿಸಿದ ಶ್ರೀರಾಜು ತನ್ನನ್ನು ತಾನು 'ಮಮ್ಮಿಫೈ' ಮಾಡಿಕೊಂಡಿದ್ದಾನೆ.

ಕಾರಿನ ಹಿಂಬದಿ ಸೀಟಲ್ಲಿ ಕೂತ ರಾಜು ಪಕ್ಕದಲ್ಲಿ ಟೆಡ್ಡಿಬೇರ್ ಇಟ್ಟಿದ್ದಾನೆ. ಬಾಯಿಗೆ ಬಟ್ಟೆ ತುರುಕಿಕೊಂಡು, ಪ್ಲಾಸ್ಟಿಕ್ ಚೀಲ ಸುತ್ತಿಕೊಂಡಿದ್ದಾನೆ. ಪ್ರೇಯಸಿಯ ನೆನಪಲ್ಲೇ ದುಃಖಿಸುತ್ತಾ ಸಾವಿನ ನೋವನ್ನು ಅನುಭವಿಸಿದ್ದಾನೆ. ಕೈಕಾಲುಗಳಿಗೆ ಸೆಲೊ ಟೇಪ್ ಬಿಗಿದಿಕೊಂಡು, ಸೀಟು ಬೆಲ್ಟ್ ಹಾಕಿಕೊಂಡು ನಿದ್ರೆ ಜಾರುತ್ತಿದ್ದಂತೆ ಸಾವಿನ ಮನೆಯನ್ನು ಹೊಕ್ಕಿದ್ದಾನೆ.

ಮರಣೋತ್ತರ ಪರೀಕ್ಷೆ ವರದಿಯಲ್ಲಿ ನಿದ್ರಾ ಮಾತ್ರೆ ಸೇವಿಸಿರುವುದು ದೃಢಪಟ್ಟಿದೆ.ಈ ರೀತಿ ವಿಕ್ಷಿಪ್ತ ಸಾವು ಇದೇ ಮೊದಲು ಎಂದು ಎಸಿಪಿ ನರಸಿಂಹಯ್ಯ ಹೇಳಿದ್ದಾರೆ. ಮಹದೇವಪುರ ಪೊಲೀಸರು ತನಿಖೆ ಮುಂದುವರೆಸಿದ್ದು, ಜೆನ್ನಿ ಬಗ್ಗೆ ಏನಾದರೂ ಮಾಹಿತಿ ಸಿಕ್ಕರೆ ಕೂಡಲೇ ಓದುಗರಿಗೆ ತಿಳಿಸುತ್ತೇವೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+