ಒಂದೇ ದಿನ 34 ಕೋಟಿ ಪಾವತಿಸಿದ ನಿರ್ಮಲ್ ಬಾಬಾ

ನಿರ್ಮಲಜೀತ್ ಸಿಂಗ್ ನಾರುಲಾ ಮೂಲ ನಾಮದ ಜ್ಯೋತಿಷಿ ನಿರ್ಮಲ್ ಬಾಬಾ ದೇಶದ ಅಗ್ರ ರಿಯಲ್ ಎಸ್ಟೇಟ್ ಸಂಸ್ಥೆಯಾದ DLF residencyಗೆ ಒಂದು ತಿಂಗಳಲ್ಲಿ 49 ಕೋಟಿ ರುಪಾಯಿ ಪಾವತಿಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲ, ಮಾಧ್ಯಮಗಳ ವರದಿ ಪ್ರಕಾರ ಈ ಧಾರ್ಮಿಕ ಗುರು ನಿರ್ಮಲ್ ಬಾಬಾ ಒಂದೇ ದಿನ 34.12 ಕೋಟಿ ರುಪಾಯಿ ಪಾವತಿಸಿದ್ದರು!
ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ (ಖಾತೆ ಸಂಖ್ಯೆ 1546000102129694) ನಿರ್ಮಲ್ ಬಾಬಾ bank draftಗಳ ಮುಖಾಂತರ ಏಪ್ರಿಲ್ 28ರಂದು ಈ ಮೊತ್ತವನ್ನು ಪಾವತಿಸಿರುವುದು ದಾಖಲಾಗಿದೆ. ಒಟ್ಟು ಏ.7 ರಿಂದ ಏ. 28ರ ನಡುವೆ ಏಳು bank draftಗಳ ಮೂಲಕ ಬಾಬಾ 49 ಕೋಟಿ ರುಪಾಯಿ ಪಾವತಿಸಿರುವುದು ದೃಢಪಟ್ಟಿದೆ.
ಬಾಬಾ ಅನೇಕ ವ್ಯಾಪಾರಗಳಲ್ಲಿ ಹಣ ಹೂಡಿದ್ದರು. ಆದರೆ ಅವುಗಳಲ್ಲೆಲ್ಲ ಕೈಸುಟ್ಟುಕೊಂಡಿದ್ದರು. ಆದರೆ ಅವರು ಇಷ್ಟಿಂದು ಮೊತ್ತ ಗಳಿಸಿದ್ದು ಅಮಾಯಕ ಭಕ್ತರು ನೀಡುತ್ತಿದ್ದ ಕಾಣಿಕೆಗಳ ಮೂಲಕ! ಹೀಗೆ ಭಕ್ತರು ನೀಡದ ಹಣವನ್ನು ರಿಯಲ್ ಎಸ್ಟೇಟ್ ಕಂಪನಿಗಳಲ್ಲಿ ತೊಡಗಿಸಿದ್ದಾರೆ.
ಧಿಡಿಗ್ಗಂತ ಎದ್ದು ಕುಳಿತ ಬಾಬಾ ರಾಮದೇವ್: ಇಂತಿಪ್ಪ ಬಾಬಾ ವಿರುದ್ಧ ಬಂಧನದ ವಾರಂಟ್ ಹೊರಡುತ್ತಿದ್ದಂತೆ ಮತ್ತೊಬ್ಬ ಬಾಬಾ, ರಾಮದೇವ್ ಧಿಡಿಗ್ಗಂತ ಎದ್ದು ಕುಳಿತಿದ್ದಾರೆ. 'ಅವರನ್ನು (ನಿರ್ಮಲರು) ಬಂಧಿಸಬಾರದು. ಅದು ಅಕ್ಷಮ್ಯ ಅಪರಾಧವಾಗುತ್ತದೆ. ಹಾಗೆಲ್ಲ ಬಾಬಾಗಳನ್ನು ಬಂಧಿಸುತ್ತಾ ಹೋದರೆ ಮುಂದೆ ನಮ್ಮ ಗತಿಯೇನು? ಹಾಗೆ ಬಂಧಿಸುವುದೇ ಆದರೆ ದಕ್ಷಿಣ ಭಾರತದಲ್ಲೂ ಒಬ್ಬ ಬಾಬಾ ಇದ್ದಾರೆ. ಆತನ ಬಳಿ 600 ಕೋಟಿ ರುಪಾಯಿ ಗಂಟಿದೆ' ಎಂದೆಲ್ಲ ಬಡಬಡಿಸಿದ್ದಾರೆ.












Click it and Unblock the Notifications