• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇವ್ ಪಾರ್ಟಿ ರೈಡ್, 100ಕ್ಕೂ ಅಧಿಕ ಜನ ಸೆರೆ

By Mahesh
|
Rave Party Busted Juhu
ಮುಂಬೈ, ಮೇ.20: ಇಲ್ಲಿನ ಪ್ರತಿಷ್ಠಿತ ಜುಹೂ ಪ್ರದೇಶದಲ್ಲಿರುವ ಓಕ್ ವುಡ್ ಪ್ರಿಮಿಯರ್ ಹೋಟೆಲ್ ನಲ್ಲಿ ಆಯೋಜಿಸಿದ್ದ ರೇವ್ ಪಾರ್ಟಿ ಮೇಲೆ ಮುಂಬೈ ಪೊಲೀಸರು ದಾಳಿ ನಡೆಸಿ 100ಕ್ಕೂ ಅಧಿಕ ಪಾರ್ಟಿ 'ಅನಿಮಲ್' ಗಳನ್ನು ಭಾನುವಾರ(ಮೇ.20) ರಾತ್ರಿ ಸೆರೆ ಹಿಡಿದಿದ್ದಾರೆ.

ಓಕ್ ವುಡ್ ಹೋಟೆಲ್ ರೇವ್ ಪಾರ್ಟಿಯಲ್ಲಿ ಸೆರೆ ಸಿಕ್ಕವರಲ್ಲಿ 38 ಯುವತಿಯರು, 58 ಯುವಕರು, 19 ವಿದೇಶಿಯರು ಇದ್ದಾರೆ. ಇಬ್ಬರು ಐಪಿಎಲ್ ಆಟಗಾರರು ಸಹ ಬಂಧಿತರಲ್ಲಿ ಸೇರಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.[ವಿಡಿಯೋ ನೋಡಿ]

ಬಂಧಿತರ ರಕ್ತ ಹಾಗೂ ಮೂತ್ರ ಪರೀಕ್ಷೆ ನಡೆಸಿ, ಮಾದಕ ದ್ರವ್ಯ ಸೇವನೆ ಬಗ್ಗೆ ಖಚಿತಪಡಿಸಿಕೊಳ್ಳಲು ಎಲ್ಲರನ್ನೂ ಕೂಪರ್ ಆಸ್ಪತ್ರೆಗೆ ಸೇರಿಸಿ ಪರೀಕ್ಷೆ ನಡೆಸಲಾಗುತ್ತಿದೆ.

ಗಣ್ಯ ವ್ಯಕ್ತಿಗಳು ಮಾತ್ರ ಭೇಟಿ ಕೊಡುವ ಐಷಾರಾಮಿ ಹೋಟೆಲ್ ನಲ್ಲಿ ರೇವ್ ಪಾರ್ಟಿಯನ್ನು ಯಾರು ಆಯೋಜಿಸಿದ್ದು ಎಂಬುದು ಇನ್ನೂ ಪತ್ತೆಯಾಗಿಲ್ಲ. ಬಂಧಿತರ ವಿವರಗಳನ್ನು ಸದ್ಯಕ್ಕೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಪಂಚನಾಮೆ ಜಾರಿಯಲ್ಲಿದ್ದು, ವೈದ್ಯಕೀಯ ಪರೀಕ್ಷೆಗಳ ನಂತರ ಹೆಚ್ಚಿನ ವಿವರ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಆರ್ ಪಾಟೀಲ್ ಹೇಳಿದ್ದಾರೆ.

ಪುಣೆ ಬಳಿ ರೇವ್ ಪಾರ್ಟಿ ಮೇಲೆ ದಾಳಿ ನಂತರ ಈಗ ಜುಹೂ ಹೋಟೆಲ್ ನಲ್ಲಿ ನಡೆದಿರುವ ದಾಳಿಯಲ್ಲಿ ಸೆರೆ ಸಿಕ್ಕವರ ಸಂಖ್ಯೆ ಅಧಿಕವಾಗಿದೆ.

ಓಕ್ ವುಡ್ ಹೋಟೆಲ್ ರೇವ್ ಪಾರ್ಟಿಯಲ್ಲಿ ಬಂಧಿತರಲ್ಲಿ ಸಮಾಜದ ಗಣ್ಯವ್ಯಕ್ತಿಗಳು, ಉದ್ಯಮ, ಚಿತ್ರರಂಗ, ಕ್ರೀಡೆ, ರಾಜಕೀಯ ವಲಯದ ಮುಖಂಡರ ಕುಟುಂಬಕ್ಕೆ ಸೇರಿದವರು ಇರುವ ಶಂಕೆಯನ್ನು ಅಲ್ಲಗೆಳೆಯುವಂತಿಲ್ಲ. ರೈಡ್ ಇನ್ನೂ ಜಾರಿಯಲ್ಲಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ರೇವ್ ಪಾರ್ಟಿ ಸುದ್ದಿಗಳುView All

English summary
Mumabi police detained over 110 persons including 38 women, 58 men, 19 foreign nationals from Oak wood hotel, Juhu, Mumbai today(May.20). Two IPL players are also allegedly among the detainees. Police also seized 110 grams of narcotics which includes cocaine, charas..etc

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more