ಗುಳಿಗೆಸಿದ್ದ ಶಿಕ್ಷಕನಿಂದ ಅತ್ಯಾಚಾರ, ಗರ್ಭಪಾತ

teacher-molests-student-forces-abortion-pill
ಲಖ್ನೋ, ಮೇ 18: ಕಾಮುಕ ಶಿಕ್ಷಕನೊಬ್ಬ ಹದಿಹರಯದ ವಿದ್ಯಾರ್ಥಿನಿಯ ಮೇಲೆ ಅತ್ಯಾಯಾಚಾರವೆಸಗಿ, 2 ತಿಂಗಳ ನಂತರ ಬಾಲಕಿ ಗರ್ಭಧರಿಸಿದಾಗ ಗರ್ಭಪಾತ ಗುಳಿಗೆಯನ್ನು ಬಲವಂತವಾಗಿ ನುಂಗಿಸಿದ ಘಟನೆ ವರದಿಯಾಗಿದೆ. ಕಸ್ತೂರ್ ಬಾ ಬಾಲಕಿಯರ ವಿದ್ಯಾಲಯದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

14 ವರ್ಷದ ಬಾಲಕಿಯ ಮೇಲೆ ದುರುಳ ಶಿಕ್ಷಕ 2 ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದ. 2 ತಿಂಗಳ ನಂತರ ಆಕೆ ಗರ್ಭವತಿಯಾಗಿದ್ದಾಳೆ ಎಂಬುದನ್ನು ತಿಳಿದು ಆಕೆಗೆ ಬಲವಂತವಾಗಿ ಗುಳಿಗೆ ನುಂಗಿಸಿದ್ದಾನೆ. ತತ್ಫಲವಾಗಿ, ಆಕೆಯ ತೀವ್ರ ರಕ್ತಸ್ರಾವಕ್ಕೆ ಒಳಗಾದಾಗ ಮನೆಯವರು ನೊಡಿ ಬೆಚ್ಚಿಬಿದ್ದಿದ್ದಾರೆ. ಮೊದಲು ಆಸ್ಪತ್ರೆಗೆ ಸೇರಿಸಿದ್ದಾರೆ. ಬಳಿಕ ಅತ್ಯಾಚಾರದ ವೃತ್ತಾಂತ ಬಹಿರಂಗವಾಗಿದೆ.

ಚಿಕಿತ್ಸೆ ನೀಡಿದ ವೃದ್ಯರು ಬಾಲಕಿ ಗರ್ಭಧರಿಸಿದ್ದಳು ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಪೋಷಕರು ಶಿಕ್ಷಕ ಮತ್ತು ಶಾಲಾ ಸಹಾಯಕಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಯಲ್ಲೇ ಬಾಲಕಿ ರಕ್ತಸ್ರಾವಕ್ಕೆ ಒಳಗಾಗಿದ್ದರೂ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರು. 'ಚಿಕಿತ್ಸೆ ದೊರೆಯುವುದು ವಿಳಂಬಗೊಂಡು ಬಾಲಕಿಯ ಸ್ಥಿತಿ ವಿಷಮಿಸಿತ್ತು. ಹೆಚ್ಚು ರಕ್ತಸ್ರಾವದಿಂದ ಬಾಲಕಿ ಆರೋಗ್ಯ ಹದಗೆಟ್ಟಿದೆ' ಎಂದು ವೈದ್ಯರು ಹೇಳಿದ್ದಾರೆ.

ಇಲ್ಲಿನ ಕಸ್ತೂರ್ ಬಾ ಬಾಲಕಿಯರ ವಿದ್ಯಾಲಯದವು ದಲಿತ ಬಾಲಕಿಯರ ವಸತಿ ಶಾಲೆಯಾಗಿದೆ. ಇತ್ತೀಚೆಗೆ ಈ ಶಾಲೆಯಲ್ಲಿ ಗಾರ್ಡ್ ಮತ್ತು ಅಡುಗೆಭಟ್ಟ ಅತ್ಯಾಚಾರವೆಸಗಿದ ಘಟನೆಗಳು ವರದಿಯಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+