ಮುಂಬೈ ದಾಳಿಗೆ ನೆರವು ನೀಡಿದ್ದು Google Earth!

ಅಮೆರಿಕದ ಹಿರಿಯ ಸೇನಾ ಕಮಾಂಡರ್ ಒಬ್ಬರು ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.
ಗುಪ್ತಚರ, ಪರಿವೀಕ್ಷಣೆ ಮುಂತಾದ ವಿಷಯಗಳಲ್ಲಿ ಭಯೋತ್ಪಾದಕರು ಹೆಚ್ಚು ಶ್ರಮವಿಲ್ಲದೆ, ಹೆಚ್ಚು ಹಣ ವ್ಯಯಿಸದೆ, ಕರಾರುವಕ್ಕಾಗಿ Google Earth ಮೂಲಕ ಮಾಡಿಮುಗಿಸಿದರು ಎಂದು ಅವರು ಹೇಳಿದರು.
ಅಷ್ಟೇ ಅಲ್ಲ ಭವಿಷ್ಯದಲ್ಲಿ ಮಾಹಿತಿ ತಂತ್ರಜ್ಞಾನ/ internet ಹೀಗೆ ದುರ್ಬಳಕೆಯಾಗುವ ಎಲ್ಲ ಸಾಧ್ಯತೆಗಳಿವೆ ಎಂದು ವರ್ಜಿನಿಯಾ ಬೀಚಿನಲ್ಲಿ ಮಂಗಳವಾರ ನಡೆದ ಸೇನಾಪಡೆಯ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಮೆರೈನ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ಜಾರ್ಜ್ ಜೆ ಫ್ಲೇಯ್ನ್ ಎಚ್ಚರಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಎಲ್ಲರಿಗೂ ಸುಲಭವಾಗಿ ದಕ್ಕುತ್ತಿರುವ ಇಂದಿನ ದಿನಗಳಲ್ಲಿ ಭಯೋತ್ಪಾದನೆಯಂತಹ ಚಟುವಟಿಕೆಗಳಿಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಅವರು ಸವಿಸ್ತಾರವಾಗಿ, ಸೋದಾಹರಣವಾಗಿ ತಿಳಿಸಿದರು.
ಮೊಬೈಲ್ ಫೋನ್ ಜಾಲ ಮತ್ತು ಭಾರತೀಯ ಸೇನೆಯ ಎಲ್ಲ ಪ್ರಯತ್ನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಯಶಸ್ವಿಯಾಗಿ ಬೇಧಿಸುತ್ತಿದ್ದರು. ಹಾರ್ವರ್ಡ್ ಬಿಸಿನೆಸ್ ರಿವ್ಯೂ ಲೇಖನದಲ್ಲಿ 2008ರ ನವೆಂಬರ್ ಮುಂಬೈ ದಾಳಿಯ ಬಗ್ಗೆ ಸವಿಸ್ತಾರವಾಗಿ ನೀಡಲಾಗಿದೆ ಎಂದು ಅವರು ಹೇಳಿದರು.












Click it and Unblock the Notifications