ಮಾಜಿ ಮುಖ್ಯಮಂತ್ರಿ ಬಿಎಸ್‌ವೈಗೆ z-security ವೈ?

why-z-category-security-for-ex-cm-bsy
ಬೆಂಗಳೂರು, ಮೇ 15: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ವಪಕ್ಷದವರ ಮೇಲೆ ಆ ಪಾಟಿ ಯುದ್ಧ ಸಾರಿದ್ದಾರೆ. ಹಾಗಾಗಿ ಅವರಿಗೆ ಜೀವ ಭಯ ಇದೆಯಾ!? ಅಥವಾ ಬೇರೆ ಯಾರಿಂದಲಾದರೂ ಬಿಎಸ್‌ವೈಗೆ ಜೀವ ಬೆದರಿಕೆ ಇದೆಯೇ?

ಸನ್ಮಾನ್ಯ ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿ ಬರೋಬ್ಬರಿ 9 ತಿಂಗಳುಗಳೇ ಕಳೆದಿವೆ. ಆದರೆ ಇಂದಿಗೂ ಅವರು ಝಡ್-ಶ್ರೇಣಿಯ security ಅನುಭವಿಸುತ್ತಿದ್ದಾರೆ. ಇತ್ತೀಚೆಗಿನ ಅವರ ರಗಳೆ-ರಂಪಾಟವನ್ನು ನೋಡಿದ ಸಾರ್ವಜನಿಕರು ಬಿಎಸ್‌ವೈಗೆ z-security ವೈ? ಎಂದು ಕೇಳುತ್ತಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚು'ವರಿ' ಆಯುಕ್ತ ಟಿ ಸುನಿಲ್ ಕುಮಾರ್ ಅವರಿಗೆ ಬಿಎಸ್‌ವೈ ಭದ್ರತೆ ಬಗ್ಗೆ ಹೆಚ್ಚು 'ವರಿ' ಇದೆ. ಏಕೆಂದರೆ ಗುಪ್ತಚರ ದಳವು ಬಿಎಸ್‌ವೈ ಜೀವಕ್ಕೆ ಅಪಾಯವಿದೆ ಎಂವ ಗುಪ್ತ ಮಾಹಿತಿಯನ್ನು ರವಾನಿಸಿದೆಯಂತೆ. ಹಾಗಾಗಿ, ಬಿಎಸ್‌ವೈಗೆ ಝಡ್-ಶ್ರೇಣಿಯ security ಕಲ್ಪಿಸಲಾಗಿದೆ.

ಆದರೆ, DCP ದರ್ಜೆಯ ಅಧಿಕಾರಿಯೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವುದೇ ವ್ಯಕ್ತಿಗೆ ಅತೀವ ಜೀವ ಬೆದರಿಕೆ ಇದ್ದರೆ ಮಾತ್ರ ಅಂಥಹವರಿಗೆ z-security ಒದಗಿಸಬೇಕು. ಆದರೆ ನಮ್ಮ ಮಾಜಿ ಮುಖ್ಯಮಂತ್ರಿಗೆ ಅಂತಹ ಯಾವುದೇ ಅಪಾಯವಿಲ್ಲ. ಆದರೂ ಏಕೆ ಈ 'ಏಳು ಸುತ್ತಿನ ಭದ್ರತಾ ಕೋಟೆ'? ದಿನದ 24 ಕಮಾಂಡೋ ರಕ್ಷಣೆ ಇವರಿಗೇಕೆ? ಎಂದು ಸಿಡುಕುತ್ತಾರೆ ಆ ಅಧಿಕಾರಿ.

z-category security ಅಂದರೆ ಆ ಸೌಲಭ್ಯ ಪಡೆದಿರುವ ವ್ಯಕ್ತಿಯ ಕಾರಿನ ಮುಂದೆ ಒಂದು pilot vehicle ಮತ್ತು ಹಿಂಭಾಗದಲ್ಲಿ ಎರಡು escort vehicleಗಳು ಇರುತ್ತವೆ. ಈ ವಾಹನಗಳಲ್ಲಿ ತಲಾ ಒಬ್ಬೊಬ್ಬ ಶಸ್ತ್ರಸಜ್ಜಿತ ಸಬ್‌ಇನ್ಸ್‌ಪೆಕ್ಟರ್ ಇರುತ್ತಾರೆ. ಝಡ್-ಶ್ರೇಣಿಯ security ಹೊಂದಿರುವ ವ್ಯಕ್ತಿ ಹೀಗೆ ಬೆಂಗಾವಲು ಪಡೆಯೊಂದಿಗೆ ರಸ್ತೆಗಳಲ್ಲಿ ಸಾಗುವಾಗ ಆ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸುವುದು ಕಡ್ಡಾಯ.

Z+, Z, Y ಮತ್ತು X ಎಂಬ ನಾಲ್ಕು ಶ್ರೇಣಿಗಳಲ್ಲಿ ಅವರವರ ಸ್ಥಾನಮಾನ ಮತ್ತು ಜೀವಭಯದ ತೀವ್ರತೆಯನ್ನು ಮಾನದಂಡವಾಗಿಸಿಕೊಂಡು ವ್ಯಕ್ತಿಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ಸರಕಾರದ ಮೇಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+