ಮೇ 17ರಂದು ಎಸ್ಸೆಸ್ಸೆಲ್ಸಿ, 23ರಂದು ಪಿಯುಸಿ ಫಲಿತಾಂಶ

ಈ ತಾಣದಲ್ಲಿ ನಿಮಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಲಭ್ಯವಾಗಲಿದೆ
ಈ ಸುದ್ದಿಯನ್ನು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿಯಲ್ಲಿ ಶುಕ್ರವಾರ ತಿಳಿಸಿದರು. ಮೇ 17ರಂದೇ ಎರಡೂ ಫಲಿತಾಂಶಗಳನ್ನು ಪ್ರಕಟಿಸಲು ನಿರ್ಧರಿಸಲಾಗಿತ್ತು. ಆದರೆ, ಸಿಇಟಿ ಪರೀಕ್ಷೆಗಳು ಮೇ 21 ಮತ್ತು 22ರಂದು ಇರುವುದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮುಂದೂಡಲಾಯಿತು ಎಂದು ಅವರು ಹೇಳಿದರು.
ಈ ತಾಣದಲ್ಲಿ 2ನೇ ಪಿಯುಸಿ ಫಲಿತಾಂಶ ಲಭ್ಯ
ಮೇ 17ರಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಿಸುವುದಾಗಿ ಕಾಗೇರಿ ಹೇಳಿದ್ದಾರಾದರೂ, ಇಂಟರ್ನೆಟ್ಟಿನಲ್ಲಿ ಅಂದೇ ಪ್ರಕಟಿಸುತ್ತಾರಾ ಇಲ್ಲವಾ ಎಂಬುದನ್ನು ಅವರು ಖಚಿತಪಡಿಸಿಲ್ಲ. ಪ್ರತಿವರ್ಷದಂತೆ ಒನ್ಇಂಡಿಯಾ ವೆಬ್‌ಸೈಟ್ ಎರಡೂ ಪರೀಕ್ಷೆಗಳ ಫಲಿತಾಂಶಗಳನ್ನು ನೀಡುತ್ತಿದ್ದು, ದಿನಾಂಕ ಮತ್ತು ಸಮಯ ಖಚಿತವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ತಿಳಿಯಪಡಿಸುತ್ತದೆ.
ಅಲ್ಲಿಯತನಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಿರಾತಂಕದಿಂದಿದ್ದು ನಮ್ಮ ಮುಂದಿನ ಮಾಹಿತಿಗಾಗಿ ಕಾಯಬೇಕಾಗಿ ವಿನಂತಿ. ನಮ್ಮ ಶೈಕ್ಷಣಿಕ ವೆಬ್ ತಾಣದಲ್ಲಿ ನಿಮ್ಮ ಈಮೇಲ್ ಐಡಿಯನ್ನು ನಮೂದಿಸಿರಿ. ಫಲಿತಾಂಶದ ನಿಖರವಾದ ದಿನಾಂಕ ಮತ್ತು ಸಮಯ ತಿಳಿಯುತ್ತಿದ್ದಂತೆ ಸಂದೇಶ ರವಾನಿಸಲಾಗುವುದು.












Click it and Unblock the Notifications