ಹರ್ಯಾಣ: ಮಹಿಳೆಯರಿಗೆ ನೋ ಜೀನ್ಸ್, ಟೀಶರ್ಟ್

ಮಹಿಳಾ ಉದ್ಯೋಗಿಗಳಿಗೆ ಹೊಸ ಡ್ರೆಸ್ ಕೋಡ್ ನೀಡಿರುವ ಇಲಾಖೆ, ಸಲ್ವಾರ್ ಕಮೀಜ್ ಅಥವಾ ಸೀರೆ ಮಾತ್ರ ತೊಡಬೇಕು ಎಂದಿದೆ. ಉದ್ಯೋಗಸ್ಥ ಮಹಿಳೆಯರು ಟೀಶರ್ಟ್ ಹಾಗೂ ಜೀನ್ಸ್ ಧರಿಸುವುದನ್ನು ನಿಷೇಧಿಸಲಾಗಿದೆ.
ಜೀನ್ಸ್ ಹಾಗೂ ಟೀ ಶರ್ಟ್ ಹಾಕಿಕೊಳ್ಳುವುದು ಅನಾಗರಿಕರ ಲಕ್ಷಣ ಹಾಗೂ ಪ್ರಚೋದನಕಾರಿಯಾಗಿದೆ. ಇದರಿಂದ ಕಿರುಕುಳ ಹೆಚ್ಚಾದರೆ ಯಾರು ಹೊಣೆ. ದುಪ್ಪಟಾ ಸಮೇತ ಸಲ್ವಾರ್ ಕಮೀಜ್ ಅಥವಾ ಸೀರೆ ಉಟ್ಟುಕೊಂಡರೆ ಸಭ್ಯವಾಗಿರುತ್ತದೆ ಎಂದು ಇಲಾಖೆ ಹೇಳಿದೆ.
ಇದಲ್ಲದೆ ಉದ್ಯೋಗಸ್ಥ ಪುರುಷರು ಸಾದಾ ಅಂಗಿ, ಪ್ಯಾಂಟ್ ಧರಿಸಬೇಕು. ಚಡ್ಡಿ, ಟೀಶರ್ಟ್ ಹಾಕಿಕೊಂಡು ಅಡ್ಡಾಡುವಂತಿಲ್ಲ ಎಂದು ಇಲಾಖೆ ಹೇಳಿದೆ. ಆದೇಶವನ್ನು ಮೀರಿ ನಡೆದರೆ ಶಿಕ್ಷೆ ಎದುರಿಸಲು ಸಿದ್ಧರಾಗಿ ಎಂದು ಇಲಾಖೆ ಎಚ್ಚರಿಸಿದೆ.
ಸಾಮಾನ್ಯವಾಗಿ ಬಹುತೇಕ ಕಂಪನಿಗಳಲ್ಲಿ ಡ್ರೆಸ್ ಕೋಡ್ ನಿಯಮ ಜಾರಿಯಲ್ಲಿದೆ. ವಾರದಲ್ಲಿ ಒಂದೆರಡು ದಿನ ಮಾತ್ರ ಕ್ಯಾಶುಯಲ್ ಡ್ರೆಸ್ ಹಾಕಿಕೊಳ್ಳುವ ಅವಕಾಶ ಇರುತ್ತದೆ. ಆದರೆ, ಹರ್ಯಾಣದ ಈ ಆದೇಶದ ವಿರುದ್ಧ ಉದ್ಯೋಗಸ್ಥ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications