ರಾಜಧಾನಿಯಲ್ಲಿ 2 ಬಾರಿ ಮಹಿಳೆಯ ಮಾನಭಂಗ

35 ವರ್ಷದ ಬಾಧಿತ ಮಹಿಳೆ ನೋಯ್ಡಾದಲ್ಲಿ ಚಹಾ ಅಂಗಡಿಯಿಟ್ಟುಕೊಂಡಿದ್ದಾಳೆ. ಆಕೆಯನ್ನು ತೀತು ಎಂಬ ಪರಿಚಿತ ವ್ಯಕ್ತಿ ತನ್ನ ಹೊಸ ಮನೆ ತೋರಿಸುವ ನೆಪದಲ್ಲಿ ಗಾಜಿಯಾಬಾದಿಗೆ ಕರೆತಂದಿದ್ದಾನೆ. ಮಾರ್ಗ ಮಧ್ಯೆ ಕಾರಿನಲ್ಲಿ ತೀತು ಮತ್ತು ಅವನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಾದವ್ ತಿಳಿಸಿದ್ದಾರೆ.
ಮತ್ತೊಮ್ಮೆ: ಶಹಿಬಾಬಾದಿಗೆ ಮರಳಿದ್ದ ಅದೇ ಮಹಿಳೆಯ ಮೇಲೆ ಮತ್ತೊಮ್ಮೆ ಸಾಮೂಹಿಕ ರೇಪ್ ನಡೆದಿದೆ. ನಿರ್ಮಾಣ ಹಂತದಲ್ಲಿ ಕಟ್ಟಡದಲ್ಲಿ ಮೂವರು ಸೇರಿಕೊಂಡು ಈ ಕುಕೃತ್ಯವೆಸಗಿದ್ದಾರೆ. ಪ್ರಜ್ಞೆ ತಪ್ಪಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಮಹಿಳೆಯನ್ನು ಸ್ಥಳೀಯರು ಪೊಲೀಸ್ ಠಾಣೆಗೆ ಕರೆತಂದು ಬಿಟ್ಟಿದ್ದಾರೆ ಎಂದು ಯಾದವ್ ಹೇಳಿದ್ದಾರೆ.
ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳ ಬಂಧನಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications