Microsoft India ಅಂದ್ರೆ ನಮಗೆ ಬಲು ಇಷ್ಟ

ಇನ್ನು 2 ಮತ್ತು 3 ನೆಯ ಸ್ಥಾನ Oracle India ಹಾಗೂ Tata Consultancy Services ಕಂಪನಿಗಳಿಗೆ ಸಂದಾಯವಾಗಿದೆ. ವೋಕ್ಸ್ ವ್ಯಾಗನ್ ಇಂಡಿಯಾ ಮತ್ತು ನೋಕಿಯಾ ಇಂಡಿಯಾ ಮುಂದಿನ ಸ್ಥಾನಗಳಲ್ಲಿವೆ.
ಪ್ರಧಾನ ಮಾನವ ಸಂಪನ್ಮೂಲ ಸೇವಾ ಕಂಪನಿಯಾದ Randstad ಈ ಪ್ರಶಸ್ತಿಯನ್ನು ಕೊಡಮಾಡುತ್ತಿದೆ. ದೇಶದಲ್ಲಿ ಉತ್ತಮ ಉದ್ಯೋಗದಾತ ಕಂಪನಿ ಎಂಬ ಬ್ರ್ಯಾಂಡ್ ಹುಟ್ಟುಹಾಕಲು ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ದೀರ್ಘಾವಧಿಗೆ ಉದ್ಯೋಗ ಭದ್ರತೆ, ಸ್ಪರ್ಧಾತ್ಮಕ ಸಂಬಳಗಳು ಭಾರತದ ಉದ್ಯೋಗಿಗಳಿಗೆ ಮಾನದಂಡವಾಗಿವೆ ಎಂದು Randstad ಸಂಸ್ಥೆ ತಿಳಿಸಿದೆ.
ಕುತೂಹಲದ ಸಂಗತಿಯೆಂದರೆ 18-24 ವರ್ಷ ವಯಸ್ಸಿನ ಉದ್ಯೋಗಿಗಳಿಗೆ Hewlett Packard ನತ್ತ ಪ್ರಥಮ ಪ್ರೀತಿಯಿದ್ದರೆ 25-34 ವರ್ಷದವರಿಗೆ Google India ಇಷ್ಟವಾಗಿದೆಯಂತೆ.












Click it and Unblock the Notifications