ತಿಂಗಳಿಗೆ 999 ರುನಲ್ಲಿ ಏರ್ ಟೆಲ್ 4ಜಿ ಸೇವೆ

ಬೆಂಗಳೂರು, ಮೇ.8: ಭಾರ್ತಿ ಏರ್‌ಟೆಲ್‌ 4ಜಿ ಬ್ರಾಡ್‌ ಬ್ಯಾಂಡ್‌ ಸೇವೆಗೆ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸೋಮವಾರ (ಮೇ.7)ಚಾಲನೆ ನೀಡಿದ್ದಾರೆ. ತ್ವರಿತಗತಿಯಲ್ಲಿ ಅಂತರ್ಜಾಲ ಸಂಪರ್ಕ ಹೊಂದಬಹುದಾದ ಈ ಸೌಲಭ್ಯ ಸದ್ಯಕ್ಕೆ ಭಾರತದಲ್ಲಿ ಕೋಲ್ಕತ್ತಾ ನಂತರ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ. 4ಜಿ ಸೌಲಭ್ಯ ಹೊಂದಬೇಕಾದರೆ 4ಜಿ ಆಧಾರಿತ ಮೊಬೈಲ್ ಫೋನ್ ಹೊಂದಿರಬೇಕಾಗುತ್ತದೆ. ಭಾರತದಲ್ಲಿ ಇನ್ನೂ ಲಭ್ಯತೆ ಇಲ್ಲ.

ಪ್ರಾಯೋಗಿಕವಾಗಿ ಮೊದಲ ಬಾರಿಗೆ ಕೇವಲ 999 ರು ಪ್ರತಿ ತಿಂಗಳಿಗೆ 4ಜಿ ಸೌಲಭ್ಯ ಪಡೆಯುವ ಅವಕಾಶವನ್ನು ಏರ್ ಟೆಲ್ ತನ್ನ ಗ್ರಾಹಕರಿಗೆ ಒದಗಿಸುತ್ತಿದೆ.
ಆರಂಭದಲ್ಲಿ ನಾಲ್ಕು ದರದಲ್ಲಿ ಈ ಸೇವೆ ಲಭ್ಯವಿದೆ.

* 'Break free' ಯೋಜನೆ>>6 GB ಮಿತಿ >> ತಿಂಗಳ ಕಂತು 999 ರು
* Break free Max ಯೋಜನೆ>>9 GB ಮಿತಿ>>1,399 ರು ಪ್ರತಿ ತಿಂಗಳಿಗೆ
* Break free Ultra ಯೋಜನೆ>>18 GB ಮಿತಿ>>1,999 ರು ಪ್ರತಿ ತಿಂಗಳಿಗೆ
* Break Free Ultimate>>30 GB ಮಿತಿ>>2,999 ರು ಪ್ರತಿ ತಿಂಗಳಿಗೆ

4ಜಿ ಸೌಲಭ್ಯಗಳು: ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಗಳಲ್ಲಿ ಇದನ್ನು ಬಳಸಬಹುದಾಗಿದೆ. ಶೀಘ್ರ ಅಂತರ್ಜಾಲ ಸಂಪರ್ಕ, IP ಟೆಲಿಫೋನಿ, ಅತ್ಯುನ್ನತ ತಂತ್ರಜ್ಞಾನದ ಆಟಗಳು, ಮೊಬೈಲ್‌ ಟೀವಿ, ವಿಡಿಯೋ ಕಾನ್ಫರೆನ್ಸಿಂಗ್‌, ಕಾಲಿಂಗ್, 3ಡಿ ಟೀವಿ ಮುಂತಾದ ಅನೇಕ ಉಪಯೋಗಗಳನ್ನು ಪಡೆಯಬಹುದಾಗಿದೆ. ಆದರೆ ಎಲ್ಲವೂ ಸಂಪೂರ್ಣ ನೆಟವರ್ಕ್ ಸರಿಯಾದ್ದರೆ ಮಾತ್ರ ಸಾಧ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+