ಇನ್ಫಿ ಕ್ಷೀಣ: ಆದ್ರೂ ಐಟಿ ಕಂಪನಿಗಳು ಬೊಂಬಾಟ್

ಕಳೆದ ಆರ್ಥಿಕ ವರ್ಷದಲ್ಲಿ ವಿಶ್ವ ಐಟಿ ಸೇವಾ ಮಾರುಕಟ್ಟೆ ಕೇವಲ ಶೇ. 7.7 ರಷ್ಟು ಪ್ರಗತಿ ಸಾಧಿಸಿರುವಾಗ ಭಾರತದ 5 ಐಟಿ ಸೇವಾ ಕಂಪನಿಗಳು ಬರೋಬ್ಬರಿ ಶೇ. 23.8ರಷ್ಟು ಆದಾಯ ಪ್ರಗತಿ ದಕ್ಕಿಸಿಕೊಂಡಿದೆ. ಸುಮಾರು 75 ಸಾವಿರ ಭಾರತೀಯ ಉದ್ಯೋಗಿಗಳನ್ನು ಹೊಂದಿರುವ Cognizant ಕಂಪನಿ ಗರಿಷ್ಠಮಟ್ಟದಲ್ಲಿ ಶೇ. 33.3ರಷ್ಟು ಪ್ರಗತಿ ಸಾಧಿಸಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಶೇ. 29.4ರ ಪ್ರಗತಿಯೊಂದಿಗೆ 2ನೆಯ ಸ್ಥಾನದಲ್ಲಿದೆ. ಹಾಗೆ ನೋಡಿದರೆ Cognizant ಕಂಪನಿಯನ್ನು ಹೊರತುಪಡಿಸಿದರೆ TCS ಕಂಪನಿಯೇ ಮೊದಲ ಸ್ಥಾನಕ್ಕೆ ಜಿಗಿಯುತ್ತದೆ. TCS ನಂತರದ ಸ್ಥಾನ Infosysಗೆ ದಕ್ಕುತ್ತದೆ. ಇನ್ನು Wipro ಹಾಗೂ HCL Technologies ಕಂಪನಿಗಳು ಇನ್ಫಿ ನಂತರವಿದೆ.
ಕಳೆದ 5 ವರ್ಷಗಳಿಂದ ಈ ಐದೂ ಕಂಪನಿಗಳು ತನ್ನ ಪ್ರಗತಿಯನ್ನು ಕಾಯ್ದುಕೊಳ್ಳುವುದರ ಜತೆಗೆ ಹೆಚ್ಚಿನ ಬಂಡವಾಳ ಹೂಡಿ, ಕಾರ್ಯಕ್ಷೇತ್ರಗಳನ್ನು ವಿಸ್ತರಿಸಿಕೊಳ್ಳುತ್ತಿರುವುದೂ ಈ ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಇನ್ನು ಕೆಲವು ಚಿಕ್ಕ ಪ್ರಮಾಣದ ಐಟಿ ಸೇವಾ ಕಂಪನಿಗಳು ಉತ್ತಮ ಆದಾಯ ಗಳಿಸುತ್ತಿವೆ. ಅವುಗಳಲ್ಲಿ Genpact ಮತ್ತು Syntel ಮುಖ್ಯವಾಗಿವೆ.












Click it and Unblock the Notifications