ಶ್ವೇತ ಭವನದ ಮೌಲ್ಯ 110 ಮಿಲಿಯನ್ ಡಾಲರ್

ಸುಮಾರು 55,000 ಚ.ಅ ವಿಸ್ತೀರ್ಣದ ಶ್ವೇತಭವನ ಮೌಲ್ಯ ನಿರ್ಧರಿಸಿದ್ದು ಜಾಸನ್ ಕೊಟ್ಜ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯ ಒಡೆಯ ಎಂದು ನ್ಯೂಯಾರ್ಕ್ ಡೈಲಿ ಪ್ರಕಟಿಸಿದೆ.
ಈ ಅದ್ದೂರಿ ಬಂಗಲೆಯ ಮೌಲ್ಯ 100 ಅಥವಾ 115 ಮಿಲಿಯನ್ ಡಾಲರ್ ನಷ್ಟಾಗಬಹುದು. ವಾಷಿಂಗ್ಟನ್ ನಲ್ಲಿ ಶ್ವೇತಭವನದಂತೆ ಇನ್ನೂ ದುಬಾರಿಯಾದ ಬಂಗಲೆಗಳಿದೆ. ಮೆಕ್ ಲೀನ್ ನಲ್ಲಿರುವ 21,000 ಚ.ಅ ಬಂಗಲೆಯೊಂದರ ಬೆಲೆ 45.5 ಮಿಲಿಯನ್ ಡಾಲರ್ ನಷ್ಟಿದೆ ಎಂದು ಜಾಸನ್ ಹೇಳಿದ್ದಾರೆ
6 ಅಂತಸ್ತಿನ 132 ಕೊಠಡಿಗಳುಳ್ಳ ಮೂರು ಎಲೆವೇಟರ್ಸ್ ಗಳುಳ್ಳ ಶ್ವೇತಭವನದಲ್ಲಿ ಬಾಸ್ಕೆಟ್ ಬಾಲ್, ಟೆನ್ನಿಸ್ ಕೋರ್ಟ್, ಸಿನಿಮಾ ಮಂದಿರ, ಬೌಲಿಂಗ್, ಸ್ವಿಮ್ಮಿಂಗ್ ಪೂಲ್ ಹಾಗು ಜಾಗಿಂಗ್ ಟ್ರ್ಯಾಕ್ ಇದೆ.
212 ವರ್ಷಗಳ ಇತಿಹಾಸ ಹೊಂದಿರುವ ಶ್ವೇತಭವನವನ್ನು ಸುಮಾರು 9 ಬಾರಿ ಪುನರುಜ್ಜೀವನಗೊಳಿಸಲಾಗಿದೆ. ಶ್ವೇತಭವನದಲ್ಲಿ ದಿವಂಗತ ಅಧ್ಯಕ್ಷರ ಭೂತಗಳಿದೆ ಎಂಬ ಸುದ್ದಿ ಚಾಲ್ತಿಯಲ್ಲಿದ್ದರೂ ಈ ಭೂತ ಬಂಗಲೆಗೆ ಭರ್ಜರಿ ಬೆಲೆಯಂತೂ ಇದ್ದೇ ಇದೆ.












Click it and Unblock the Notifications