ಒಬಾಮಾ ವಿಮಾನ ಸ್ಫೋಟಿಸಲು ಆದೇಶಿಸಿದ್ದ ಒಸಾಮಾ
ನವದೆಹಲಿ,
ಮೇ 5: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಪ್ರಯಾಣಿಸುವ ವಿಮಾನವನ್ನು ಉಡಾಯಿಸಿ, ಸಾಯಿಸುವಂತೆ ಒಸಾಮಾ ಬಿನ್ ಲಾಡೆನ್ ಮುಂಬೈ ದಾಳಿ ರೂವಾರಿ ಇಲಿಯಾಸ್ ಕಶ್ಮೀರಿಗೆ ನಿರ್ದೇಶಿಸಿದ್ದ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ಜತೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮಿಲಿಟರಿ ಕಾರ್ಚಾರಣೆಯ ನೇತೃತ್ವ ಹೊತ್ತಿದ್ದ ಜನರಲ್ ಡೇವಿಡ್ ಪೆಟ್ರಿಯಾಸ್ ಗೂ ಅದೇ ಗತಿ ಕಾಣಿಸುವಂತೆ ಸೂಚನೆ ನೀಡಿದ್ದ. id="toptextpromo">ಅಮೆರಿಕ
ವಿಶೇಷ ಕಾರ್ಚಾರಣೆಯಲ್ಲಿ ಬಿನ್ ಲಾಡೆನ್ ನನ್ನು ಅಬೋತಾಬಾದ್ ಮನೆಯಲ್ಲಿ ಗುಂಡಿಟ್ಟು ಸಾಯಿಸಿದ ಸಂದರ್ಭದಲ್ಲಿ ಈ ಸಂಬಂಧ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯಲ್ಲಿ ತೊಡಗಿದ್ದ ಇಲಿಯಾಸ್ ಕಶ್ಮೀರಿ ಈ ಇಬ್ಬರ ವಿಮಾನಗಳ ಮೇಲೂ ದಾಳಿ ಮಾಡಿ ಹತ್ಯೆ ಮಾಡಲು ಎರಡು ಟಾಸ್ಕ್ ಫೋರ್ಸ್ ಗಳನ್ನೂ ರಚಿಸಿದ್ದ ಎಂಬ ಆಘಾತಕಾರಿ ಸಂಗತಿ ಅಮೆರಿಕ ಮಿಲಿಟರಿ ಅಕಾಡೆಮಿ ಪತ್ತೆ ಹಚ್ಚಿದೆ. id='are-slot-1' class='oiad oi-axt oiadv'> id='top-searched-articles'>ಎರಡು
ಘಟಕಗಳನ್ನು ರಚಿಸಿ ಒಬಾಮಾ ಮತ್ತು ಪೆಟ್ರಿಯಾಸ್ ಇಬ್ಬರನ್ನೂ ಹತ್ಯೆ ಮಾಡಲು ಇಲ್ಯಾಸ್ ಗೆ (ಇಲಿಯಾಸ್ ಕಶ್ಮೀರಿ) ಕಾರ್ಯಭಾರ ಒಪ್ಪಿಸುವಂತೆ ಮುಸ್ತಾಫಾ ಅಬು ಅಲ್ ಯಾಜೀದ್ ಗೆ ಬಿನ್ ಲಾಡೆನ್ ನಿರ್ದೇಶಿಸಿದ್ದ. ಈ ಎರಡು ಘಟಕಗಳಲ್ಲಿ ಒಂದನ್ನು ಪಾಕಿಸ್ತಾನದಲ್ಲಿ ಮತ್ತೊಂದನ್ನು ಅಫ್ಘಾನಿಸ್ತಾನದ ಬಗ್ರಾಂನಲ್ಲಿ ಸ್ಥಾಪಿಸುವಂತೆ ಲಾಡೆನ್ ಸೂಚಿಸಿದ್ದಾಗಿ ಈ ದಾಖಲೆ ಪತ್ರಗಳಿಂದ ತಿಳಿದುಬಂದಿದೆ.











Click it and Unblock the Notifications