ಮಹಿಳಾ ಟೆಕ್ಕಿ ಹತ್ಯೆ: BFಗೆ ಜೀವಾವಧಿ ಶಿಕ್ಷೆ

ಅಲ್ಪ ಶಿಕ್ಷೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಮೃತಳ ತಂದೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ 29 ವರ್ಷದ ಅಪರಾಧಿಯು ಈಗಾಗಲೇ ಮೂರು ವರ್ಷ ಜೈಲುವಾಸ ಅನುಭವಿಸಿದ್ದಾನೆ. ಇನ್ನು 11 ವರ್ಷ ಜೈಲಿನಲ್ಲಿದ್ದು, ಬಿಡುಗಡೆಗೊಳ್ಳುತ್ತಾನೆ.
26 ವರ್ಷದ ಪಲೊಮಾ ಫರ್ನಾಂಡಿಸ್ ಎಂಬ ಬಿಪಿಒ ಟೆಕ್ಕಿಯನ್ನು ಅಕ್ವಿನೊ ಮಾರ್ಟಿಸ್ 2009ರ ಜನವರಿ 28ರಂದು ಬೆಳಗಿನ ಜಾವ ಆಕೆಯ ಮನೆಯಲ್ಲಿ ಅವಿತಿಟ್ಟುಕೊಂಡಿದ್ದು, ಭೀಕರವಾಗಿ ಹತ್ಯೆ ಮಾಡಿದ್ದ.
2008ರಲ್ಲಿ... ಗೋವಾ ಮೂಲದ ಪಲೊಮಾ ಮುಂಬೈನ ಮಲಾಡಿನಲ್ಲಿ JP Morgan ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದರು. ಅಕ್ವಿನೊ ಮಾರ್ಟಿಸ್, ಪಲೊಮಾ ಇದ್ದ ಅಪಾರ್ಟ್ ಮೆಂಟಿನಲ್ಲೇ ವಾಸವಾಗಿದ್ದ. ಇಬ್ಬರ ಮೈ-ಮನಗಳಲ್ಲಿ ಪ್ರೀತಿ ಪ್ರೇಮ ಮನೆ ಮಾಡಿತ್ತು. ಪಲೊಮಾ ಅಪ್ಪ-ಅಮ್ಮ ಈ ಲವ್ವಿಗೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಅಪ್ಪನ ಮಾತಿಗೆ ಬೆಲೆ ಕೊಡದ ಪಲೊಮಾ, ಅವನೇ ನನ್ನ ಗೆಣೆಗಾರ ಎಂದು ಉಲಿದಿದ್ದಳು. ಇದರಿಂದ ಅವಳ ಪೋಷಕರು ಮೌನವಹಿಸಿದರು.
ಆದರೆ ಮುಂದೆ ಅದೇನಾಯಿತೋ ಪಾಪಿಷ್ಠ ಅಕ್ವಿನೊ ಮಾರ್ಟಿಸ್ ಅದೊಂದು ರಾತ್ರಿ ನೈಟ್ ಶಿಫ್ಟ್ ಮುಗಿಸಿ ಬಂದ ಪಲೊಮಾಳನ್ನು ತಿವಿದು ತಿವಿದು ಸಾಯಿಸಿದ್ದ. ಪಲೊಮಾ ಡ್ಯೂಟಿ ಮುಗಿಸಿ, ಕ್ಯಾಬ್ ನಿಂದ ಇಳಿದು ಬೆಳಗಿನ ಜಾವ 3.30ರಲ್ಲಿ ಎಂದಿನಂತೆ ತನ್ನ ಮನೆ ಸೇರಿಕೊಂಡಿದ್ದಳು.
ಆದರೆ ಅದು ಹೇಗೋ ಮೊದಲೇ ಆ ಮನೆಯಲ್ಲಿ ಅವಿತಿಟ್ಟುಕೊಂಡಿದ್ದ ಅಕ್ವಿನೊ ಮಾರ್ಟಿಸ್ ಅವಳು ಒಳಗೆ ಬರುತ್ತಿದ್ದಂತೆ ಮೃಗದಂತೆ ಅವಳ ಮೇಲೆರಗಿ ಹತ್ಯೆ ಮಾಡಿದ್ದ. ಹಾಗೆ ತನ್ನ ಪ್ರಿಯತಮೆಯನ್ನು ಸಾಯಿಸುವಾಗ ಅಕ್ವಿನೊ ಮಾರ್ಟಿಸ್, ತನ್ನ ಹೊಟ್ಟೆಗೂ ತಿವಿದುಕೊಂಡಿದ್ದ.
ಅಕ್ವಿನೊ ಮಾರ್ಟಿಸ್ ನಿರುದ್ಯೋಗಿಯಾಗಿದ್ದ. ಹತ್ಯೆ ಘಟನೆಗೆ ಮುನ್ನ ಪಲೊಮಾ ತನ್ನ ಬ್ಯಾಂಕ್ ಖಾತೆಯಿಂದ ಒಂದಷ್ಟು ಹಣ ತೆಗೆದುಕೊಂಡು ಬಾಯ್ ಫ್ರೆಂಡ್ ಅಕ್ವಿನೊ ಮಾರ್ಟಿಸ್ ಗೆ ನೀಡಿದ್ದಳು. ಆಗ ಪಲೊಮಾ ಬಳಿ ಹೆಚ್ಚಿಗೆ ಹಣವಿದೆ ಎಂದು ಬಗೆದ ಅಕ್ವಿನೊ ಮಾರ್ಟಿಸ್, ಪಲೊಮಾಳ ಎಟಿಎಂ ಕಾರ್ಡನ್ನು ಕದ್ದಿದ್ದ.
ಅದನ್ನು ಗಮನಿಸಿದ ಪಲೊಮಾ ತಕ್ಷಣ ಕಾರ್ಡನ್ನು ಸ್ಥಗಿತಗೊಳಿಸಿದ್ದಳು. ಇದರಿಂದ ವ್ಯಘ್ರಗೊಂಡ ಪ್ರೇಮಿ ಅಕ್ವಿನೊ ಮಾರ್ಟಿಸ್, ಪಲೊಮಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ.












Click it and Unblock the Notifications