ಕಂದಮ್ಮಗಳ ಸಹಿತ ಭಾರತೀಯ ದಂಪತಿ ಸಾವು

ಅಕೌಂಟೆಂಟ್ ನೀಲೇಶ್ ಶರ್ಮಾ (36), ಪ್ರೀತಿಕಾ (32) ಅವರ ಮಕ್ಕಳಾದ ದಿವೇಶ್ (5) ಮತ್ತು ದಿವ್ಯಾ (3) ನಗರದ ಗ್ಲೆನ್ ವೇವರ್ಲಿ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ.
'ಯುವ ಕುಟುಂಬದ ಬಗ್ಗೆ ಆತಂಕ ವ್ಯಕ್ತಪಡಿಸಿ, ಸಮೀಪ ಬಂಧಿಗಳು ದೂರವಾಣಿ ಕರೆ ಮಾಡಿದಾಗ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ನೀಲೇಶ್ ಶವ ಹಾಲಿನಲ್ಲಿದ್ದರೆ ಉಳಿದ ಮೂವರ ಶವ ಬೆಡ್ ರೂಮಿನಲ್ಲಿ ಪತ್ತೆಯಾಯಿತು' ಎಂದು ಪೊಲೀಸರು ತಿಳಿಸಿದ್ದಾರೆ.
'ದಂಪತಿ ಅನ್ಯೋನ್ಯವಾಗಿದ್ದರು. ಯಾವುದೇ ಸಮಸ್ಯೆಗಳು ಅವರನ್ನು ಬಾಧಿಸುತ್ತಿರಲಿಲ್ಲ, ಇಬ್ಬರು ಮಕ್ಕಳಂತೂ ಅಚ್ಚುಮೆಚ್ಚಾಗಿದ್ದರು. ಉತ್ತಮ ಸಂಸ್ಕಾರ ಹೊಂದಿದ್ದರು' ಎಂದು ಪೊಲೀಸರಿಗೆ ಕರೆ ಮಾಡಿದ್ದ ವ್ಯಕ್ತಿ ಅಭಯ್ ಸಿಂಗ್ ತಿಳಿಸಿದ್ದಾರೆ.
ಈ ಕುಟುಂಬವು ಹತ್ತು ವರ್ಷಗಳ ಹಿಂದೆ ಫಿಜಿಯಿಂದ ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡು ವಾಸಿಸುತ್ತಿತ್ತು. ಅವರ ಸಾವಿಗೆ ನಖರ ಕಾರಣವೇನೆಂಬುದು ಶವಪರೀಕ್ಷೆ ಮತ್ತು ಹೆಚ್ಚಿನ ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications