ಬ್ಲೂ ಫಿಲಂ ಸಿಡಿಯಲ್ಲಿ ಅಲ್ ಖೈದಾ ದಾಳಿ ರಹಸ್ಯ

ಅಲ್ ಖೈದಾ ಉಗ್ರರು ಮುಂಬೈ ದಾಳಿ ಮಾದರಿಯಲ್ಲಿ ಯುರೋಪ್ ದೇಶಗಳ ಮೇಲೂ ಭಯೋತ್ಪಾದನೆ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದವು. ಆ ಸಂಚಿನ ವಿವರಗಳೆಲ್ಲ ಬ್ಲೂ ಫಿಲಂ ಸಿಡಿಯೊಳಗೆ ಬೆಚ್ಚಗೆ ಅಡಗಿ ಕುಳಿತಿತ್ತು. ಆ ಸಿ.ಡಿ. ಈಗೆಲ್ಲಪ್ಪ ಸಿಕ್ತೂ, ಯಾರತ್ರ ಇತ್ತಪ್ಪಾ ಅಂತ ಕುತೂಹಲದಿಂದ ನೋಡಿದಾಗ... ಪಾಕಿಸ್ತಾನದಿಂದ ಬುಡಾಪೆಸ್ಟಿಗೆ ವಾಪಸಾಗುತ್ತಿದ್ದ ಉಗ್ರನೊಬ್ಬ ಈ ಬ್ಲೂ ಫಿಲಂ ಸಿ.ಡಿ.ಯನ್ನು ತನ್ನ ಕಾಚಾದಲ್ಲಿ ಅವತಿಸಿಟ್ಟುಕೊಂಡಿದ್ದ.
ಕಳೆದ ವರ್ಷ ಬರ್ಲಿನ್‌ನಲ್ಲಿ ಸೆರೆಯಾಗಿರುವ ಆಸ್ಟ್ರಿಯಾದ ಉಗ್ರ ಮಕ್ಸೂದ್ ಲೋದಿನ್ (22) ಬಳಿಯಿದ್ದ ಈ ಸಿ.ಡಿ.ಯೊಳಗೆ ಕೋಡ್ ವರ್ಡ್ ಗಳಲ್ಲಿ ಯುರೋಪ್ ಒಕ್ಕೂಟದ ಮೇಲೆ ಮುಂಬೈ ಮಾದರಿಯಲ್ಲಿ ಹೇಗೆಲ್ಲ ದಾಳಿ ಮಾಡಬಹುದು ಎಂಬ ವಿವರಗಳು ಇದ್ದವು ಎಂದು ಅಮೆರಿಕದ ಗುಪ್ತ ಇಲಾಖೆ ಮೂಲಗಳಿಂದ ತಿಳುದುಬಂದಿದೆ. ಜರ್ಮನ್, ಇಂಗ್ಲಿಷ್ ಮತ್ತು ಅರೇಬಿಯಾ ಭಾಷೆಗಳಲ್ಲಿ ಈ ಮಾಹಿತಿಗಳು ದಾಖಲಾಗಿದ್ದವು.
'Kick Ass' ನಾಮಾಂಕಿತ ಬ್ಲೂ ಫಿಲಂ ಸಿ.ಡಿ. ಯೊಳಗೆ 'Sexy Tanja' ಫೈಲ್ ನಲ್ಲಿ ಅವಿತಿಡಲಾಗಿತ್ತು. ಈ 'Kick Ass' ಬ್ಲೂ ಫಿಲಂ ಸಿ.ಡಿ.ಯನ್ನು ಮೊದಲಿನಿಂದ ಕೊನೆಯವರೆಗೂ ಇಡೀ ಒಂದು ವಾರ ಕಾಲ ಮತ್ತೆ ಮತ್ತೆ ವೀಕ್ಷಿಸಿದ ಜರ್ಮನ್ ತನಿಖಾಧಿಕಾರಿಗಳು ಕೊನೆಗೆ ಯುರೇಕಾ ಅಂತ ಉದ್ಘರಿಸಿದ್ದಾರೆ. ಎಕೆಂದರೆ ಆ ಸಿ.ಡಿ. ಗರ್ಭದಲ್ಲಿ ನೂರಾರು 'ಸ್ಫೋಟಕ ದಾಖಲೆಗಳು' ಅಡಗಿದ್ದವು.
ಇವುಗಳ ಪೈಕಿ Future Works ಎಂಬ ಫೈಲ್ ನಲ್ಲಿ master plan ವಿವರಗಳು ಕಂಡುಬಂದಿವೆ. 2009ರಲ್ಲಿಯೇ ಇವುಗಳನ್ನು ಕೆತ್ತಲಾಗಿದೆ. ಇಡೀ ವಿಶ್ವ ತನ್ನ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದ ಅಲ್ ಖೈದಾ ಉಗ್ರರು ಇಂತಹ ಅಶ್ಲೀಲ ಚಿತ್ರ ವಿಡಿಯೋಗಳಿಗೆ ಅಂಕಿತಗೊಂಡಿದ್ದರು ಎಂದು ಅಧಿಕಾರಿಗಳು ಆಶ್ಚರ್ಯದಿಂದ ತಿಳಿಸಿದ್ದಾರೆ.












Click it and Unblock the Notifications