BSP ಸಂಸದನ ಮನೆಯಲ್ಲಿ ಯುವತಿಯ ಮಾನಭಂಗ

ಹದಿಹರಯದ ಬಾಲಕಿಯತ್ತ ಪಿಸ್ತೂಲು ಹಿಡಿದು ಬೆದರಿಸಿ ಮಾನಭಂಗ ನಡೆಸಿರುವ ಘಟನೆ ನಡೆದಿದೆ. ಲಖೀಂಪುರ ಖೇರಿಯಲ್ಲಿರುವ ಬಿಎಸ್ ಪಿ ಸಂಸದ ಜುಗಲ್ ಕಿಶೋರ್ ಅವರ ಮನೆಯಲ್ಲೇ ಈ ಕುಕೃತ್ಯ ಎಸಗಿದ್ದಾರೆ. ಯುವತಿಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಸಂಸದ ಜುಗಲ್ ಅವರ ಭದ್ರತಾಪಡೆ ಸಿಬ್ಬಂದಿ ಬ್ರಿಜೇಶ್ ಮಾನಭಂಗ ಮಾಡಿರುವ ಆರೋಪಿ. 16 ವರ್ಷದ ಯುವತಿಯನ್ನು ಆರೋಪಿ ದರದರನೆ ಸಂಸದ ಜುಗಲ್ ಕಿಶೋರ್ ಅವರ ಮನೆಯೊಳಕ್ಕೆ ಎಳೆದೊಯ್ದು ಮಾನಭಂಗ ಮಾಡಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸಾಗುತ್ತಿದ್ದಾಗ ದುರುಳ ಬ್ರಿಜೇಶ್ ತನ್ನ ಮಾನಭಂಗ ಮಾಡಿದ್ದಾನೆ. ಆ ವೇಳೆ ಸಂಸದ ಜುಗಲ್ ಮನೆಯಲ್ಲೇ ಇದ್ದರು ಎಂದು ಯುವತಿ ಅಲವತ್ತುಕೊಂಡಿದ್ದಾಳೆ.












Click it and Unblock the Notifications