ಪಾಕ್ ಹಿಂದೂ ಶಾಸಕನಿಗೆ ಒಂದು ವರ್ಷ ಜೈಲು
ಇಸ್ಲಾಮಾಬಾದ್,ಏ.25:
ಶಾಸಕ ಮಹಾಶಯನೊಬ್ಬ ತಾನು ಬಿಎ ಪದವಿ ಪಡೆದಿರುವುದಾಗಿ ನಕಲಿ ಪ್ರಮಾಣಪತ್ರ ಸಲ್ಲಿಸಿ, ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಸೋಮವಾರ ಆ ಶಾಸಕಗೆ 1 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 15 ಸಾವಿರ ದಂಡ ವಿಧಿಸಿದೆ. ಆ ಶಾಸಕ ಹಿಂದೂ ಸಮುದಾಯಕ್ಕೆ ಸೇರಿದ್ದು, ಜಮಾತ್ ಉಲೇಮಾ-ಇ-ಇಸ್ಲಾಮ್ ಪಕ್ಷದವರಾಗಿದ್ದಾರೆ. id="toptextpromo">ಪಶ್ಚಿಮೋತ್ತರ
ಪಾಕಿಸ್ತಾನದ ದೂವಾರಾ ಇಸ್ಮಾಯಿಲ್ ಖಾನ್ ಪ್ರಾಂತ್ಯದ ಸೆಷನ್ ಜಡ್ಜ್ ಶಾಹಜಹಾನ್ ಖಾನ್ ಅವರು ತೀರ್ಪು ಪ್ರಕಟಿಸುತ್ತಿದ್ದಂತೆ ಖೈಬರ್-ಪಖ್ತೂನವಾ ಅಸೆಂಬ್ಲಿಯ ಸದಸ್ಯ ಕಿಶೋರ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳಿಸಿದರು. ಈ ಮಧ್ಯೆ, ಜಾಮೀನು ಕೋರಿ ಕಿಶೋರ್ ಅರ್ಜಿ ಸಲ್ಲಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲ್ಪಸಂಖ್ಯಾತ
ಸಮುದಾಯಕ್ಕೆ ಮೀಸಲಾದ ಕ್ಷೇತ್ರದಿಂದ 2008ರ ಚುನಾವಣೆಯಲ್ಲಿ ಕಿಶೋರ್ ಕುಮಾರ್ ಜಯಗಳಿಸಿದ್ದರು. ಬಳಿಕ, ಚುನಾವಣೇ ಆಯೋಗವು ಅವರ ಪೂರ್ವೋತ್ತರಗಳನ್ನು ಪರಿಶೀಲಿಸುವಾಗ ಗೋಮಲ್ ವಿಶ್ವವಿದ್ಯಾಲಯದಿಂದ ಕಿಶೋರ್ ಪಡೆದಿರುವ ಬಿಎ ಪದವಿ ಸರ್ಟಿಫಿಕೇಟ್ ನಕಲಿ ಎಂಬುದು ಸಾಬೀತಾಗಿದೆ.











Click it and Unblock the Notifications