ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದ ಐಎಎಸ್

ias-officer-vijay-kharadi-ties-knot-at-mass-wed
ಅಹಮದಾಬಾದ್, ಏ.25: 28 ವರ್ಷದ ಯುವ ಐಎಎಸ್ ಅಧಿಕಾರಿಯೊಬ್ಬರು ದುಂದುವೆಚ್ಚದ ಮದುವೆಗೆ ಹಾತೊರೆಯದೆ ಸಾಮೂಹಿಕ ವಿವಾಹ ವೇದಿಕೆಯಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ನಿಜಕ್ಕೂ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಂತಹ ಆಡಳಿತಕ್ಕೆ ಇಂತಹ ಅಧಿಕಾರಿಗಳು ಮಾದರಿಯಾಗಿದ್ದಾರೆ. 2009ರ ಬ್ಯಾಚ್ ಅಧಿಕಾರಿಯಾಗಿ ಪದಗ್ರಹಣ ಮಾಡಿ, ನರ್ಮದಾ ಜಿಲ್ಲೆಯ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಆರಂಭಿಸಿರುವ ವಿಜಯ್ ಖಾರಡಿ ಅವರೇ ಇಂತಹ ಸರಳತೆಯ ಪಾಣಿಗ್ರಹಣ ಸಾಕಾರಗೊಳಿಸಿರುವ ಅಧಿಕಾರಿ.

ವಿಜಯ್, ಸೀಮಾ ಗರೆಶಿಯಾ ಎಂಬುವವರನ್ನು ಮದುವೆ ಸಮಾರಂಭದಲ್ಲಿ ಒಟ್ಟು 35 ಜೋಡಿಗಳು ಭಿಲೋಡಾ ತಾಲೂಕಿನಲ್ಲಿ ಅಕ್ಷಯ ತದಿಗೆಯ ಶುಭ ದಿನದಂದು ಸತಿಪತಿಗಳಾದರು. ನಿಕಟ ಬಂಧುಗಳು ಮತ್ತು ಆಪ್ತ ಸ್ನೇಹಿತರು ಮಾತ್ರ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಭರ್ ಕಾಂತಾ ಜಿಲ್ಲೆಯ ಖೇಡ್ ಭ್ರಾಮಾ ತಾಲೂಕಿನ ಹಿಂದುಳಿದ ದುಂಗ್ರಿ ಗರೆಶಿಯಾ ಸಮುದಾಯಕ್ಕೆ ಸೇರಿದವರು. ವಧು ಸೀಮಾ ಅವರು ಸಹ ಇದೇ ಜಿಲ್ಲೆಯ ವಿಜಯನಗರದವರು.

ಅಂದಹಾಗೆ, ವಿಜಯ್ ಖಾರಡಿ ಅವರು 2006ರಿಂದ ಐಎಎಸ್ ಪರೀಕ್ಷೆಗಾಗಿ ಸರ್ದಾರ್ ಪಟೇಲ್ ಇನ್ಸ್ ಟಿಟ್ಯೂಟಿನಲ್ಲಿ ತರಬೇತಿ ಪಡೆದವರು. ಅದಕ್ಕೂ ಮುನ್ನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅವರು ಬಿಇ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಹಸಿರು ಹುಲ್ಲುಗಾವಲು ಬಯಸಿ ಐಎಎಸ್/ಐಪಿಎಸ್ ಅಧಿಕಾರಿಗಳಾಗಲು ಯುವಜನತೆ ಹಿಂದೇಟು ಹಾಕುತ್ತಿರುವಾಗ ವಿಜಯ್ ಖಾರಡಿ ಅವರು ಕಂಪ್ಯೂಟರ್ ಟೆಕ್ಕಿಯಾಗಿಯೂ ಐಎಎಸ್ ಅಧಿಕಾರಿಯಾಗಿಯೇ ಉಳಿಯಬಯಸಿರುವುದು ಸ್ತುತ್ಯಾರ್ಹ.

ವಿಜೃಂಭಣೆಯ ವಿವಾಹವೆಂದರೆ ಅದು ದುಂದುವೆಚ್ಚವೇ ಸರಿ. ಇಂತಹ ಸರಳ ಸಮಾರಂಭದಲ್ಲಿ ಅಷ್ಟೇ ಸರಳವಾಗಿ ಮದುವೆಯಾಗುವ ಮೂಲಕ ನನ್ನ ಸೋದರ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದು ಐಎಎಸ್ ವರನ ಸೋದರ ಶಿರೀಶ್ ಖಾರಡಿ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ. ಯುವ ಐಎಎಸ್/ಐಪಿಎಸ್ ಅಧಿಕಾರಿಗಳಿಗೆ ವಿಜಯ್ ಖಾರಡಿ ದಂಪತಿ ಮಾದರಿಯಾಗಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+