ಸೋನಿ ಇಂಡಿಯಾಗೆ 500 ಸಿಬ್ಬಂದಿ ಬೇಕಂತೆ
ನವದೆಹಲಿ,ಏ.25:
ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಸೋನಿ ಇಂಡಿಯಾ ಕಂಪನಿ ಭಾರತದಲ್ಲಿ ಉತ್ತಮ ವಹಿವಾಟು ಕಂಡಿದ್ದು, ಇನ್ನೊಂದು ವರ್ಷದಲ್ಲಿ ಇನ್ನೂ 500 ಮಂದಿ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ಹೇಳಿದೆ. id="toptextpromo">'ಭಾರತದಲ್ಲಿ
ಕಂಪನಿ ಹೆಚ್ಚು ಲಾಭದಾಯಕ ವಹಿವಾಟು ನಡೆಸುತ್ತಿದೆ. ಮಾನವ ಸಂಪನ್ಮೂಲ ಸಾಮರ್ಥ್ಯ ಹೆಚ್ಚಿಸಲು ನೇಮಕ ಮಾಡಿಕೊಳ್ಳಲಿದ್ದೇವೆ. ಪ್ರಸಕ್ತ ನಮ್ಮಲ್ಲಿ 3,300 ಮಂದಿ ಉದ್ಯೋಗಿಗಳಿದ್ದಾರೆ' ಎಂದು ಸೋನಿ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮಸರು ಟಮಗಾವ ಮಂಗಳವಾರ ಪ್ರಕಟಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸೋನಿ
ಇಂಡಿಯಾ 2010-11ನೇ ಸಾಲಿನಲ್ಲಿ 5,400 ಕೋಟಿ ರು. ಆದಾಯ ಗಳಿಸಿದೆ. ಇದು ಕಂಪನಿಯ ಜಾಗತಿಕ ವಹಿವಾಟಿಗೆ ಶೇ. 5ರಷ್ಟು ಕೊಡುಗೆಯಾಗಿದೆ. ಜಪಾನ್, ಅಮೆರಿಕ, ಚೀನಾ ಮತ್ತು ಬ್ರೆಜಿಲ್ ನಂತರದ ಸ್ಥಾನದಲ್ಲಿದೆ, ಭಾರತ. ಕಂಪನಿ ಇತ್ತೀಚೆಗೆ 34 ಹೊಸ ಡಿಜಿಟಲ್ ಕ್ಯಾಮರಾಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕಂಪನಿಯ ಪ್ರಮಾಣ ಶೇ. 42ರಷ್ಟಿದೆ. 2012-13ನೇ ಸಾಲಿನಲ್ಲಿ 42 ಲಕ್ಷ ಕ್ಯಾಮರಾಗಳು ಮಾರಾಟವಾಗುವ ನಿರೀಕ್ಷೆಯಿದೆ.











Click it and Unblock the Notifications