ಇಂದು 15,000 ಕೆಜಿ ಚಿನ್ನ ಮಾರಾಟ

ಯಾವುದೇ ಚಿನ್ನದ ಅಂಗಡಿ ಮುಂದೆ ನೋಡಿದರೂ ಜನ ಸಾಲುಗಟ್ಟಿ ನಿಂತಿರುವ ದೃಶ್ಯ ಇಂದು ಸಾಮಾನ್ಯವಾಗಿರುತ್ತದೆ. ಬೆಳಗ್ಗೆ 7-8 ಗಂಟೆಗೆಲ್ಲ ಅಂಗಡಿಮುಂಗಟ್ಟುಗಳನ್ನು ತೆರೆಯಲಾಗಿದೆ. ಮಧ್ಯ ರಾತ್ರಿ ವರೆಗೂ ಚಿನ್ನ ನಿರಂತರವಾಗಿ ಖರೀದಿಯಾಗಲಿದೆ. ಅಂದಹಾಗೆ ಕಳೆದ ವರ್ಷ ವಿಶ್ವದ ಅತಿ ಹೆಚ್ಚು ಖರೀದಿ ರಾಷ್ಟ್ರವಾದ ಭಾರತ 967 ಟನ್ ಚಿನ್ನ ಖರೀದಿಸಿತ್ತು.
ಚಿನ್ನದ ಅಕ್ಷಯ: ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ವಹಿವಾಟಿನಲ್ಲಿ ಶೇ. 5 ಜಾಸ್ತಿಯಾಗುವ ನಿರೀಕ್ಷೆಯನ್ನು ಹೊಂದಲಾಗಿದೆ. ಹೀಗಾಗಿ ಈ ಬಾರಿ 4 ಸಾವಿರ ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ. 15 ಹೆಚ್ಚು ಎನ್ನುತ್ತಾರೆ ಚಿನ್ನದ ವ್ಯಾಪಾರಿಗಳು.
ವಿದೇಶದಲ್ಲಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಕುಸಿದಿದ್ದರೂ, ಭಾರತದಲ್ಲಿ ಶುಭ ದಿನ ನಂಬಿಕೆ ಮೇಲೆ ಖರೀದಿ ಭರಾಟೆ ಜೋರಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಸೋಮವಾರ 10 ಗ್ರಾಂ ಗೆ ರೂ. 29,070 ರಷ್ಟಾಗಿದ್ದು, ಕಳೆದ 3 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೇರಿದೆ. ಅದರೆ ಮುಂಬೈ ಪೇಟೆಯಲ್ಲಿ ಮಾತ್ರ ಚಿನ್ನದ ದರ 10 ಗ್ರಾಂಗೆ 28,500 ರ ಆಸುಪಾಸಿನಲ್ಲಿತ್ತು.












Click it and Unblock the Notifications