• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದ್ಯ ನ್ಯಾ ಸುಧೀಂದ್ರರಾವ್ ವರ್ಗ ಆಗಿಲ್ಲ!

By Srinath
|
ಬೆಂಗಳೂರು,ಏ.23: ರಾಜ್ಯಾದ್ಯಂತ 264 ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್ ಪಿ. ಕೃಷ್ಣಭಟ್ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡ ನ್ಯಾಯಾಧೀಶರು ಮೇ 21ರೊಳಗೆ ನಿಯೋಜಿತ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ನಿರ್ದೇಶಿಸಿ, ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ವರ್ಗಾವಣೆ ವಿವರವನ್ನು ಪ್ರಕಟಿಸಲಾಗಿದೆ.

ವಾರ್ಷಿಕ ವಿಧಿಯಂತೆ ಈ ವರ್ಗಾವಣೆಗಳಾಗಿವೆಯಾದರೂ ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ಅವರನ್ನು ವರ್ಗ ಮಾಡಿಲ್ಲ. ಅಷ್ಟರಮಟ್ಟಿಗೆ ಕರ್ನಾಟಕದ ಜನತೆ ಸೇಫ್. ಏಕೆಂದರೆ ನ್ಯಾ ಸುಧೀಂದ್ರ ರಾವ್‌ ಅವರ ಖಡಕ್ ತೀರ್ಪುಗಳಿಂದ ಪರೆಶಾನ್ ಆಗಿದ್ದ ರಾಜಕೀಯ ಮಂದಿ ಏನಾದರೂ ಮಾಡಿ ಮೊದಲು ಅವರನ್ನು transfer ಮಾಡಿ ಎಂದು ಒಂದೇ ಸಮನೆ ದುಂಬಾಲು ಬಿದ್ದಿದ್ದರು.

ಇದ್ದೊಬ್ಬ ಪ್ರಮಾಣಿಕ ನ್ಯಾ ಸಂತೋಷ ಹೆಗ್ಡೆ ಅವರು ನಿವೃತ್ತಿಯಾದ ಮೇಲೆ ಶೇ. 100ರಷ್ಟು ಪರಿಪೂರ್ಣ, ಅಕಳಂಕಿತ ನ್ಯಾಯಮೂರ್ತಿಗಳು ದೊರಕದೆ ಲೋಕಾಯುಕ್ತ ಎಂಬ ಸಂಸ್ಥೆ ಸ್ತಬ್ಧವಾಗಿರುವಾಗ ಜನರಿಗೆ ಆಶಾಕಿರಣವಾಗಿರುವವರು ನ್ಯಾ ಸುಧೀಂದ್ರರಾವ್. ಅವರನ್ನು ವ್ಯವಸ್ಥಿತವಾಗಿ ಸ್ಥಾನಪಲ್ಲಟಗೊಳಿಸಿದ್ದರೆ ಕರ್ನಾಟಕದಲ್ಲಿ ಭ್ರಷ್ಟರು ನಿರಾತಂಕವಾಗಿ ಮೇಯುತ್ತಿದ್ದರು. ಆದರೆ ಸದ್ಯ ಹಾಗಾಗಿಲ್ಲ.

ಇನ್ನು, 'ದ್ವಿಪತ್ನಿತ್ವ ಅನುಸರಿಸುತ್ತಿದ್ದಾರೆ, ಹಣ ವಸೂಲಿ ಮಾಡುತ್ತಿದ್ದಾರೆ, ಇನ್ನೊಂದು, ಮತ್ತೊಂದು ಹಗರಣದಲ್ಲಿ ಸಿಲುಕಿದ್ದಾರೆ ಎಂದು ಕಾರಣ ನೀಡಿ, ರಾಜಕಾರಣಿಗಳನ್ನು ಅವರ ಸ್ಥಾನದಿಂದ ವಜಾಗೊಳಿಸುತ್ತಾ ಹೋದರೆ ಸಂಸತ್ತಿನಲ್ಲಿ ಒಬ್ಬರೂ ಉಳಿಯುವುದಿಲ್ಲ' ಎಂದು ಹಾಸ್ಯಕ್ಕೆ ಆಸ್ಪದ ನೀಡುವ (ಹಾಸ್ಯಾಸ್ಪದ) ಹೈ ನ್ಯಾಯಾಧೀಶರುಗಳು ಇರುವಾಗ ನ್ಯಾ ಸುಧೀಂದ್ರರಾವ್ ಜನಸಾಮಾನ್ಯರಿಗೆ ಮತ್ತಷ್ಟು ಆಪ್ತರಾಗುತ್ತಾರೆ.

ಈ ಮಧ್ಯೆ, ಬೇಸರದ ಸಂಗತಿಯೊಂದು ಈ ವರ್ಗಾವಣೆಯಲ್ಲಿ ಕೇಳಿಬಂದಿದೆ. ಏನಪಾ ಅಂದರೆ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾಗಿದ್ದ ಮೈಸೂರು ಲೋಕಾಯುಕ್ತ ಕೋರ್ಟಿನ ಸೆಷನ್ಸ್ ಜಡ್ಜ್ ಸಿ.ಚಂದ್ರಮಲ್ಲೇ ಗೌಡ ಅವರನ್ನು ದಾವಣಗೆರೆ ಫ್ಯಾಮಿಲಿ ಕೋರ್ಟಿನ ಜಡ್ಜ್ ಆಗಿ ನೇಮಕಗೊಳಿಸುವ ಪ್ರಸ್ತಾವನೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ನ್ಯಾ ಸುಧೀಂದ್ರರಾವ್ ಸುದ್ದಿಗಳುView All

English summary
As an annual proces 264 Judges are transferred on April 21, 2012. But the Lokayukta Judge N K Sudhindrarao is spared.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more