ಇದೇನು ವಿಧಿಯಾಟವೋ ಆಕಸ್ಮಿಕವೋ ಕಾಕತಾಳೀಯವೋ

Actor playing Judas hangs accidentally
ಬ್ರಜಿಲ್, ಏ. 23 : ಏಸು ಕ್ರಿಸ್ತನಿಗೆ ಮೋಸ ಮಾಡಿ ಆತ ಶಿಲುಬೆಗೇರುವಂತೆ ಮಾಡಿದ, ಕ್ರಿಸ್ತನ 12 ಅನುಯಾಯಿಗಳಲ್ಲೊಬ್ಬನಾದ ಜುಡಾಸ್ ಇಸ್ಕಾರಿಯೋಟ್ ಪಶ್ಚಾತ್ತಾಪದಿಂದ ನೇಣಿಗೇರುವ ದೃಶ್ಯ. ಜೀಸಸ್ ಕ್ರೀಸ್ತನನ್ನು ಹತ್ಯೆ ಮಾಡಿದ ಪಾಪವನ್ನು ಭರಿಸಲಾಗದೆ ತನ್ನ ಕೊರಳನ್ನು ಉರುಳಿಗೊಡ್ಡುವ ಕ್ಷಣ.

ರಂಗಮಂಚದ ಮೇಲಿದ್ದ ನಟರೆಲ್ಲ ತನ್ಮಯತೆಯಿಂದ ಅಭಿನಯದಲ್ಲಿ ತೊಡಗಿದ್ದರು. ಪ್ರೇಕ್ಷಕರೆಲ್ಲ ತದೇಕಚಿತ್ತದಿಂದ ಅತ್ಯಂತ ನೈಜವಾಗಿ ಬರುತ್ತಿದ್ದ ನಾಟಕವನ್ನು ನೋಡುತ್ತಿದ್ದರು. ಜುಡಾಸ್ ಇಸ್ಕಾರಿಯೋಟ್ ನೇಣಿಗೆ ಬಿದ್ದವನಂತೆ ನಟಿಸಬೇಕಾಗಿತ್ತು. ಪ್ರೇಕ್ಷಕರು ಜುಡಾಸ್ ಪಾತ್ರ ಮಾಡುತ್ತಿದ್ದ ನಟನ ನಟನೆಯನ್ನು ಶ್ಲಾಘಿಸಿದ್ದೇ ಶ್ಲಾಘಿಸಿದ್ದು.

ಒಂದು ನಿಮಿಷವಾಯಿತು, ಎರಡು ನಿಮಿಷವಾಯಿತು, ಮೂರಾಯಿತು ನಾಕಾಯಿತು... ನೇಣಿಗೆ ಬಿದ್ದಿದ್ದ 27 ವರ್ಷದ ಟಿಯಾಗೊ ಕ್ಲೀಮೆಕ್ ನೇಣಿಗೆ ಬಿದ್ದೇ ಇದ್ದ. ಏನೋ ಅಚಾತುರ್ಯವಾಯಿತು ಎಂದು ಆತನನ್ನು ಇಳಿಸಿ ನೋಡಿದಾಗ ಕ್ಲೀಮೆಕ್ ನಿಜವಾಗಲೂ ನೇಣಿಗೆ ಬಿದ್ದಿದ್ದ. ಪ್ರಜ್ಞೆ ತಪ್ಪಿದವನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಭಾನುವಾರ ಕ್ಲೀಮೆಕ್ ಅಸುನೀಗಿದ್ದಾರೆ.

ನೇಣಿನ ಕುಣಿಕೆಯನ್ನು ಹಾಕುವಾಗ ನಡೆದ ಅಚಾತುರ್ಯದಿಂದ ದುರಂತ ನಡೆದುಬಿಟ್ಟಿತು. 2000 ವರ್ಷಗಳ ಹಿಂದೆ ನಡೆದ ಘಟನೆಯನ್ನು 'ಪ್ಯಾಷನ್ ಪ್ಲೇ' ನಾಟಕದಲ್ಲಿ ಅಭಿನಯಿಸಲು ಹೋಗಿ, ಆ ನಟನೇ ವಿಧಿವಶನಾದ ವಿಚಿತ್ರ ಘಟನೆ ಜಗುರಿದೆ. ಇದನ್ನು ವಿಧಿಯಾಟ ಅನ್ನುವುದೋ, ಆಕಸ್ಮಿಕ ಅನ್ನುವುದೋ, ಕಾಕತಾಳೀಯ ಅನ್ನುವುದೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+