ಅಶ್ಲೀಲ ಸಿಡಿಯಲ್ಲಿ ಸಿಲುಕಿದ ಸಿಂಘ್ವಿ ರಾಜೀನಾಮೆ

ಪಕ್ಷದ ಅತ್ಯಂತ ಶಿಸ್ತಿನ ಮತ್ತು ನಿಷ್ಠಾವಂತ ಕಾರ್ಯಕರ್ತನಾಗಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಕಾಂಗ್ರೆಸ್ ವಕ್ತಾರನಾಗಿ ಮತ್ತು ಸ್ಥಾಯಿ ಸಮಿತಿಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಪತ್ರಿಕಾ ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ಅಶ್ಲೀಲ ಸಿಡಿಯನ್ನು ತಿರುಚಲಾಗಿದೆ ಮತ್ತು ಸೃಷ್ಟಿಸಲಾಗಿದೆ ಎಂದು ಮೂರು ಬಾರಿ ಹೇಳಲಾಗಿದ್ದರೂ, ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆಗಿರುವ ಸುಪ್ರೀಂ ಕೋರ್ಟ್ ವಕೀಲ ಸಿಂಘ್ವಿ ಕೆಂಡ ಕಾರಿದ್ದಾರೆ.
ಅವರ ಮಾಜಿ ಡ್ರೈವರ್ ಸೃಷ್ಟಿಸಿದ್ದಾನೆನ್ನಲಾದ ಅಶ್ಲೀಲ ಸಿಡಿ ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಬಹಿರಂಗವಾದ ಮೇಲೆ ಸಿಂಘ್ವಿ ಅವರು ದೆಹಲಿ ಹೈಕೋರ್ಟ್‌ನಿಂದ, ಆ ಸಿಡಿಯಲ್ಲಿನ ಮಾಹಿತಿಯನ್ನು ಪ್ರಕಟಿಸದಂತೆ ಮತ್ತು ಅಶ್ಲೀಲ ಎಂಎಂಎಸ್ ಮುದ್ರಿಸದಂತೆ, ಹಂಚದಂತೆ ತಡೆಯಾಜ್ಞೆ ತಂದಿದ್ದರು.
ನ್ಯಾಯಾಲಯದಿಂದ ಆಜ್ಞೆ ಬಂದು, ಡ್ರೈವರ್ ಲಾಲ್ ಮತ್ತು ಸಿಂಘ್ವಿ ನಡುವೆ ಸಂಧಾನದ ಒಪ್ಪಂದವಾದ ಮೇಲೂ ಅಶ್ಲೀಲ ಸಿಡಿ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಸಾಕಷ್ಟು ಹರಿದಾಟ ನಡೆಸಿತ್ತು. ತನಗಾಗದವರು ತನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ವ್ಯವಸ್ಥಿತ ಸಂಚು ಹೂಡಿದ್ದಾರೆ ಎಂದು ಅಭಿಷೇಕ್ ಸಿಂಘ್ವಿ ಹರಿಹಾಯ್ದಿದ್ದರು. ಸಿಂಘ್ವಿ ಅವರ ರಾಜೀನಾಮೆಯನ್ನು ಬಿಜೆಪಿ ಸ್ವಾಗತಿಸಿದೆ.












Click it and Unblock the Notifications