ಹೆಣ್ಣುಮಗು ಹೆತ್ತ ಹೆಂಡತಿಗೆ ವಿಷವಿಕ್ಕಿದ ಗಂಡ
ನವದೆಹಲಿ,ಏ.21:
ಹೆಣ್ಣುಮಗುವಿಗೆ ಜನ್ಮ ನೀಡಿದಳೆಂದು ಆರೋಪಿಸಿದ ದುರುಳ ಗಂಡನೊಬ್ಬ ತನ್ನ ಹೆಂಡತಿಗೆ ವಿಷವಿಕ್ಕಿದ್ದಾನೆ. ಮಧ್ಯ ದಿಲ್ಲಿಯ ಲಾಹೋರಿ ಗೇಟ್ ಪ್ರದೇಶದಲ್ಲಿ ಈ ದುರದೃಷ್ಟ ಘಟನೆ ನಡೆದಿದೆ. id="toptextpromo">ಆರೋಪಿ
ಜಾವೇದ್ ತಾರಿಖ್ ತನ್ನ ಪತ್ನಿ, 30 ವರ್ಷದ ಇಶಾಕ್ ಪರ್ವೀನ್ ಗೆ ವಿಷವುಣಿಸಿ ಗುರುವಾರ ರಾತ್ರಿ ಆಕೆಯನ್ನು ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಸೇರಿಸಿದ್ದಾನೆ. ಸ್ವತಃ ಆಕೆಯೇ ವಿಷ ಸೇವಿಸಿದ್ದಾಳೆ ಎಂದು ಜಾವೇದ್ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿ, ಅಲ್ಲಿಂದ ಪರಾರಿಯಾಗಿದ್ದಾನೆ. ಪರ್ವೀನ್ ಆರೋಗ್ಯ ಗಂಭೀರವಾಗಿದ್ದು, ವಿಶೇಷ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಪರ್ವೀನ್ ಅಪ್ಪ ಮಲಿಕ್ ಸಿಕಂದರ್ ಅವರು ಜಾವೇದ್ ವಿರುದ್ಧ ದೂರು ದಾಖಲಿಸಿದ್ದಾರೆ. 'ಒಂದೂವರೆ ತಿಂಳ ಹಿಂದೆ ಪರ್ವೀನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಜಾವೇದ್, ತನ್ನ ಮಗಳಿಗೆ ಒಂದೇ ಸಮನೆ ಹೊಡೆದುಬಡಿದು ಮಾಡುತ್ತಿದ್ದ' ಎಂದು ಸಿಕಂದರ್ ದೂರಿದ್ದಾರೆ. ಪರ್ವೀನ್ ಚೇತರಿಕೆಗಾಗಿ ಕಾಯುತ್ತಿರುವ ಪೊಲೀಸರು ಆಕೆಯಿಂದ ಹೇಳಿಕೆ ಪಡೆದು ಆರೋಪಿ ಪತಿಯನ್ನು ಬಂಧಿಸಲು ಕಾಯುತ್ತಿದ್ದಾರೆ.











Click it and Unblock the Notifications