ಪಾಕ್ ನಲ್ಲಿ ವಿಮಾನ ಅಪಘಾತ, ಅಪಾರ ಸಾವುನೋವು

ಭೋಜಾ ಏರ್ ಫ್ಲೈಟ್ ಬಿ4213 ಕರಾಚಿಯಿಂದ ಹೋರಾಟ ವಿಮಾನ ಇಸ್ಲಾಮಾಬಾದಿನ ಬೆನಜೀರ್ ಭುಟ್ಟೋ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಹೊರಗೆ ಅಪಘಾತಕ್ಕೆ ಈಡಾಗಿದೆ. ವಿಮಾನದಲ್ಲಿ 118 ಮಂದಿ ಪ್ರಯಾಣಿಕರು ಮತ್ತು 9 ಮಂದಿ ವಿಮಾನ ಸಿಬ್ಬಂದಿಗಳು ಇದ್ದರು.
ವಿಮಾನದ ಅವಶೇಷಗಳು ಇಸ್ಲಾಮಾಬಾದ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಹುಸೇನ್ ಅಬದ್ ಹಳ್ಳಿಯ ಬಳಿ ಬಿದ್ದಿದೆ ಎಂದು ವಿಮಾನ ನಿಲ್ದಾಣದ ಪೋಲೀಸ್ ಅಧಿಕಾರಿ ಫಾಜಲ್ ಅಕ್ಬರ್ ಹೇಳಿಕೆ ನೀಡಿದ್ದಾರೆ.
ಕರಾಚಿಯಿಂದ ಇಸ್ಲಾಮಾಬಾದ್ ಗೆ ತನ್ನ ಪ್ರಥಮ ಸಂಚಾರ ಆರಂಭಿಸಿದ್ದ ಈ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವಿಗೆ ಈಡಾಗಿದ್ದಾರೆಂದು ಪಾಕ್ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದ್ದರೂ ಕೆಲವರು ಬದುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜುಲೈ 2010ರಲ್ಲಿ ಏರ್ ಬ್ಲೂ ವಿಮಾನವು ಕರಾಚಿ ಬಳಿ ಪತನಗೊಂಡಿತ್ತು ಅದರಲ್ಲಿ 152 ಮಂದಿ ಸಾವನ್ನಪ್ಪಿದ್ದರು. ಏರ್ ಲೈನ್ಸಿನ Introductory offer 1999* ಎಂಬ ಕೊಡುಗೆ ವಿಧಿ ಆಟದ ಕುಚೋದ್ಯವಲ್ಲದೆ ಮತ್ತಿನ್ನೇನು?












Click it and Unblock the Notifications