ಶುಭ ಕಾಲ ಬಂದಿದೆ ವಿಜಯ್ ಮಲ್ಯ ಸಾಹೇಬ್ರಿಗೆ

ಸಾಲದ ಹೊರೆಯಿಂದ ಬಳಲುತ್ತಿರುವ ಡಾ ವಿಜಯ್ ಮಲ್ಯ ಅವರ ಕಿಂಗ್ ಫಿಷರ್ ಸಂಸ್ಥೆ ಜೆಟ್ ಇಂಧನವನ್ನು ನೇರವಾಗಿ ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ಗುರುವಾರ(ಏ.19)ದಿಂದ ಚಾಲನೆ ದೊರೆತಿದೆ. ಇಂಧನ ಬೆಲೆಯನ್ನು ಶೇ.20 ರಷ್ಟು ತಗ್ಗಿಸಿರುವ ಸರ್ಕಾರ, ಇಂಧನ ಶೇಖರಣೆ ಮಾಡಿಕೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಿಕೊಳ್ಳುವಂತೆ ಸೂಚಿಸಿದೆ.
ವಿಮಾನಯಾನ ಟರ್ಬೈನ್ ಇಂಧನ ಆಮದು ಮಾಡಿಕೊಳ್ಳಲು ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ ಅಧಿಕೃತವಾಗಿ ಅನುಮತಿ ನೀಡಿದ ಮೇಲೆ ಕಿಂಗ್ ಫಿಷರ್ ಸಂಸ್ಥೆ ಜೀವ ಬಂದಂತಾಗಿದೆ.
ಒನ್ ವರ್ಲ್ಡ್ ಮೈತ್ರಿಕೂಟದ ಭಾಗವಾಗಿರುವ ಕಿಂಗ್ ಫಿಷರ್ ಜಾಗತಿಕವಾಗಿ ಹಾಗೂ ದೇಶಿಯವಾಗಿ ವಿಮಾನಯಾನ ಹಾದಿ ಸುಗುಮವಾಗುವ ಲಕ್ಷಣಗಳು ಕಂಡು ಬಂದಿದೆ. ಸುಮಾರು 6,419 ಕೋಟಿ ಸಾಲದ ಹೊರೆ ಹೊತ್ತಿರುವ ಕಿಂಗ್ ಫಿಷರ್ ಸಂಸ್ಥೆಗೆ ಶುಭಕಾಲ ಆರಂಭವಾಗಿದ್ದು, ಮತ್ತೆ ಕಿಂಗ್ ಫಿಷರ್ ವಿಮಾನಗಳು ಎಂದಿನಂತೆ ಹಾರಾಡುವ ದಿನಗಳು ಬರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯವಾಗಿ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಸಂಸ್ಥೆಗಳು ಇಂಧನ ಒದಗಿಸುತ್ತಿದೆ. ಆದರೆ, ವಿವಿಧ ರೀತಿಯ ತೆರಿಗೆ ಹೊರೆ ಹೇರುತ್ತಿದ್ದು, ಕಿಂಗ್ ಫಿಷರ್ ಸೇರಿದಂತೆ ಹಲವು ಸಂಸ್ಥೆಗಳು ವಿದೇಶಿ ಸಂಸ್ಥೆಗಳಿಂದ ಇಂಧನ ಖರೀದಿಸಲು ಮುಂದಾಗಿದೆ.












Click it and Unblock the Notifications