ಸಹಪಾಠಿಯ ರೇಪ್: 9 ಹೈಸ್ಕೂಲ್ ವಿದ್ಯಾರ್ಥಿಗಳ ಸೆರೆ

ಬಾಧಿತ ವಿದ್ಯಾರ್ಥಿನಿ ಹಾಗೂ 9 ಮಂದಿ ಆರೋಪಿಗಳು ರೂರ್ ಕೆಲಾ ಜಿಲ್ಲೆಯ ಬಿಸ್ರಾದಲ್ಲಿರುವ ಪ್ರೌಢಶಾಲೆಯೊಂದರ 10ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅತ್ಯಾಚಾರಕೀಡಾದ ಬಾಲಕಿ ತನ್ನಿಬ್ಬರು ಸ್ನೇಹಿತೆಯರ ಜತೆ ಶುಕ್ರವಾರ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಈ ಪೈಶಾಚಿಕ ಕೃತ್ಯ ಎಸಗಿದ್ದಾರೆ.
ಸಾಯಂಕಾತ ಮನೆಗೆ ವಾಪಸಾಗುತ್ತಿದ್ದ ವಿದ್ಯಾರ್ಥಿನಿಯನ್ನು ಆರೋಪಿ ವಿದ್ಯಾರ್ಥಿಗಳು ತಡೆದಾಗ, ಇಬ್ಬರು ಹುಡುಗಿಯರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವಲ್ಲಿ ಸಫಲರಾದರು. ಆದರೆ ದುರ್ದೈವಿ ಬಾಲಕಿಯೊಬ್ಬಳು ಇವರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ತಕ್ಷಣ ಆರೋಪಿಗಳು ಹತ್ತಿರದ ಕಾಡಿಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯು ಘಟನೆಯ ಬಗ್ಗೆ ಕುಟುಂಬದವರಿಗೆ ತಿಳಿಸಿ, ಬಳಿಕ ಶನಿವಾರ ಪೊಲೀಸ್ ದೂರನ್ನು ದಾಖಲಿಸಿದ್ದಾಳೆ. ಆರೋಪಿಗಳು ಅಪ್ರಾಪ್ತ ವಯಸ್ಕರಾದ ಕಾರಣ ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಬಾಲಾಪರಾಧಿಗಳ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications