ಸೇನಾ ಸಿಬ್ಬಂದಿಗೆ ಫೇಸ್‌ಬುಕ್, ಅರ್ಕುಟ್ ಕಟ್
ನವದೆಹಲಿ,ಏ.16:
ದೇಶದ ಸೇನಾಪಡೆಯ ಯಾವುದೇ ಸಿಬ್ಬಂದಿ ಫೇಸ್‌ಬುಕ್, ಟ್ವೀಟರ್, ಆರ್ಕುಟ್, ಗೂಗಲ್ ಪ್ಲಸ್ ಅಂತಹ ಆನ್‌ಲೈನ್ ಸಾಮಾಜಿಕ ತಾಣಗಳಲ್ಲಿ ಗುರಿತಿಸಿಕೊಳ್ಳುವುದಕ್ಕೆ ಸೇನೆ ನಿಷೇಧಿಸಿದೆ. ಈಗಾಗಲೇ ಇಂತಹ ತಾಣಗಳಲ್ಲಿ ಇರುವವರು ಕೂಡಲೇ ಅವುಗಳಿಂದ ವಿಮುಖರಾಗಬೇಕು. ಜತೆಗೆ ಮುಂದೆ ಕೂಡಾ ಅಂತಹ ತಾಣಗಳಿಗೆ ಸೇರಬಾರದು ಎಂದೂ ಸೇನೆ ಸೂಚನೆ ಹೊರಡಿಸಿದೆ. id="toptextpromo">ಆನ್‌ಲೈನ್‌ನಲ್ಲಿ
ಸಕ್ರಿಯರಾಗಿರುವವರ ಮೂಲಕ ಗುಪ್ತ ಮಾಹಿತಿ ಪಡೆಯಲು ಶತ್ರು ರಾಷ್ಟ್ರಗಳಿಗೆ ಸುಲಭ ಸಾಧ್ಯವಾಗುತ್ತದೆ. ಹಾಗಾಗಿ ಶತ್ರು ರಾಷ್ಟ್ರಗಳ ಆಮಿಷಕ್ಕೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಎರಡು ತಿಂಗಳ ಹಿಂದೆಯೇ ಈ ಸಂಬಂಧ ಸೇನೆ ಆದೇಶ ಹೊರಡಿಸಿದೆ. id='are-slot-1' class='oiad oi-axt oiadv'> id='top-searched-articles'>ಸುಮಾರು
36,000 ಅಧಿಕಾರಿ ವರ್ಗ ಹಾಗೂ 11.3 ಲಕ್ಷ ಸೇನಾ ಸಿಬ್ಬಂದಿಯ ಪೈಕಿ ಪ್ರತಿಯೊಬ್ಬರ ಆನ್‌ಲೈನ್ ಚಲನವಲನಗಳ ಬಗ್ಗೆ ಕಣ್ಣಿಡುವುದು ಅಸಾಧ್ಯ ಸಂಗತಿ. ಹೀಗಾಗಿ ಅವರು ಇಂತಹ ತಾಣಗಳಿಗೆ ಪ್ರವೇಶ ಪಡೆಯುವುದನ್ನೇ ನಿಷೇಧಿಸುವುದೆ ಸೂಕ್ತ ಎಂದು ಭಾರತೀಯ ಸೇನೆ ತೀರ್ಮಾನಿಸಿದೆ. ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೇನೆ ನಿರ್ಧರಿಸಿದೆ.











Click it and Unblock the Notifications