ಎಚ್ಡಿಕೆ ದ್ವಿಪತ್ನಿತ್ವ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸರಿಯಾದ ಸಾಕ್ಷಿ ಆಧಾರಗಳಿಲ್ಲದ ಕಾರಣ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರಿದ್ದ ಹೈಕೋರ್ಟ್ ನ ವಿಭಾಗೀಯ ಪೀಠ ಸೋಮವಾರ(ಏ.9) ಬೆಳಗ್ಗೆ ವಜಾಗೊಳಿಸಿದೆ.
ಐಪಿಸಿ ಸೆಕ್ಷನ್ 494ರ ಪ್ರಕಾರ ಕಾನೂನುಬಾಹಿರವಾಗಿ ಎರಡನೇ ಮದುವೆಯಾಗುವುದು ಶಿಕ್ಷಾರ್ಹ ಅಪರಾಧ. ಆದರೆ ಎಚ್ ಡಿ ಕುಮಾರಸ್ವಾಮಿ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಕಾನೂನುಬಾಹಿರವಾಗಿ ನಟಿ ರಾಧಿಕಾರನ್ನು ಮದುವೆಯಾಗಿದ್ದಾರೆ ಎಂದು ಶಶಿಧರ್ ವಾದಿಸಿದ್ದರು.
ಎರಡನೇ ಮದುವೆಯಾಗಿದ್ದರೂ ಅವರ ವಿರುದ್ಧ ಯಾವುದೇ ತನಿಖೆಗೆ ಒತ್ತಾಯಿಸುತ್ತಿಲ್ಲ ಎಂದು ವಕೀಲರು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಎಚ್ ಡಿ ಕುಮಾರಸ್ವಾಮಿ ಅವರು ಕಾನೂನುಬಾಹಿರವಾಗಿ ವಿವಾಹವಾಗಿರುವ ಬಗ್ಗೆ ಸರಿಯಾದ ಸಾಕ್ಷಿ ದೊರೆಯದ ಕಾರಣ ಕೇಸು ಮುರಿದು ಬಿದ್ದಿದೆ.












Click it and Unblock the Notifications