ಜಗನ್ ಆಸ್ತಿ ಮೂಲ ಹುಡುಕುತ್ತಿರುವ ಸಿಬಿಐ

CBI Chargesheet YS Jagan
ಹೈದರಾಬಾದ್, ಏ.9: ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಜಾರ್ಜ್ ಶೀಟ್ ತಯಾರಿಸಿ ಕೋರ್ಟಿಗೆ ಸಲ್ಲಿಸಿರುವ ಸಿಬಿಐ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಜಗನ್ ಆಸ್ತಿಗೆ ಸಂಬಂಧಿಸಿದಂತೆ, ವಿದೇಶಗಳಲ್ಲಿ ಇರುವ ಖಾತೆಗಳತ್ತ ಸಿಬಿಐ ಗಮನಹರಿಸಿದೆ.

ಜಗನ್ ಅಕ್ರಮ ಆಸ್ತಿ ಗಳಿಕೆ(ಈಗಿನ ಮೌಲ್ಯ ಅಂದಾಜು 365 ಕೋಟಿ ರು) ಹೇಗೆ ಆಗಿದೆ ಎಂಬುದರ ಮೂಲ ಹುಡುಕುತ್ತಿರುವ ಸಿಬಿಐ ಇದಕ್ಕಾಗಿ ಹಲವು ದೇಶಗಳ ನೆರವು ಪಡೆಯಲಿದೆ.

ವೈಎಸ್ ರಾಜಶೇಖರ ರೆಡ್ಡಿ ಸಿಎಂ ಆಗಿದ್ದ 2004-2009 ಅವಧಿಯಲ್ಲಿ ಸಾರ್ವಜನಿಕ ಹಣವನ್ನು ಹೇಗೆ ಪೋಲುಮಾಡಲಾಯಿತು. ವಿಶೇಷ ಆರ್ಥಿಕ ವಲಯದ ಹೆಸರಿನಲ್ಲಿ ವಿದೇಶಿ ಕಂಪನಿಗಳಿಂದ ಎಷ್ಟು ಹಣ ಸರ್ಕಾರಕ್ಕೆ ಸಂದಾಯವಾಯಿತು. ಗಣಿಗಾರಿಕೆ ಮಾಡಲು ಕರ್ನಾಟಕ-ಆಂಧ್ರ ಗಡಿಯಲ್ಲಿ ಎಷ್ಟು ಕಂಪನಿಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಸಲಿದೆ.

ಬೋಗಸ್ ಕಂಪನಿಗಳನ್ನು ಸೃಷ್ಟಿಸುವುದರಲ್ಲಿ ನಿಷ್ಣಾತನಾದ ವೈಎಸ್ ಜಗನ್ ಬೇನಾಮಿ ಕಂಪನಿಗಳ ಬಗ್ಗೆ ಆಡಿಟರ್ ವಿಜಯ ಸಾಯಿ ರೆಡ್ಡಿ ಈಗಾಗಲೇ ಎಲ್ಲವನ್ನೂ ಹೇಳಿರುವುದು ಜಗನ್ ಗೆ ಮುಳುವಾಗುವ ಸಾಧ್ಯತೆಯಿದೆ.

ಬ್ರಿಟಿಷ್ ವರ್ಜಿನ್ ದ್ವೀಪ, ಮಾರಿಷಸ್ ನಲ್ಲಿರುವ ಕಂಪನಿಗಳಿಂದ ಜಗನ್ ಕಂಪನಿಗೆ ಬಂದಿರುವ ಮೊತ್ತದ ಲೆಕ್ಕಾಚಾರದಲ್ಲಿ ಸಿಬಿಐ ತೊಡಗಿದೆ.

ಜಗನ್ ಕಂಪನಿಯ ಬಂಡವಾಳ ಹೂಡಿಕೆದಾರರು, ಷೇರುದಾರರ ವಿವರ ಕೂಡಾ ಸಿಬಿಐಗೆ ಸದ್ಯದಲ್ಲೇ ಲಭ್ಯವಾಗಲಿದೆ. ಆಕ್ರಮ ಆಸ್ತಿ ಪ್ರಕರಣದ ಜೊತೆಗೆ ವಿದೇಶಿ ವಿನಿಯಮಯ ಹಾಗೂ ಮನಿ ಲ್ಯಾಂಡರಿಂಗ್ ಪ್ರಕರಣವನ್ನು ಜಗನ್ ಮೇಲೆ ಹೇರಲು ಸಿಬಿಐ ಸರ್ವಸನ್ನದ್ಧವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+