ಗೋವಾ ಪ್ರವಾಸಕ್ಕೆ ಈಗಿನಿಂದಲೇ ರೆಡಿಯಾಗಿ

goa-hotels-go-cheaper-tax-reduction
ಪಣಜಿ, ಏ.5: ಮೊನ್ನೆಯಷ್ಟೇ ಪೆಟ್ರೋಲ್‌ ಬೆಲೆ ಲೀಟರಿಗೆ 11 ರೂ. ಇಳಿಸಿ ಶಹಬ್ಬಾಸ್ ಎನಿಸಿಕೊಂಡಿರುವ ಗೋವಾದ ನೂತನ ಬಿಜೆಪಿ ಸರಕಾರ ಈಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಈ ಬಾರಿ ತನ್ನ ಸ್ವಚ್ಚಂದ ಸಮುದ್ರ ತೀರಗಳನ್ನು ವೇದಿಕೆಯಾಗಿಸಿಕೊಂಡಿರುವ ಗೋವಾ, ಬೀಚುಗಳಲ್ಲಿ ನೀವು ಏನೇ ಮೋಜು ಮಾಡಿ, ಶೇ. 50 ರಷ್ಟು ರೇಟು ಕಡಿಮೆ ಮಾಡುತ್ತೇವೆ ಎಂದಿದೆ. ಆದರೆ ಒಂದು ಸ್ವಲ್ಪ ತಡೆಯಿರಿ. ಇದು ಅನ್ವಯವಾಗುವುದು ಮಳೆಗಾಲದಲ್ಲಿ ಮಾತ್ರ!

ಮಳೆಗಾಲದಲ್ಲಿ ಯಾರು ತಾನೇ ಬೀಚುಗಳಲ್ಲಿ ಬಿದ್ದು ಹೊರಳಾಡುತ್ತಾರೆ. ಹಾಗಾಗಿ ಆ ಕಾಲದಲ್ಲಿ ಇಲ್ಲಿನ ಪ್ರವಾಸೋದ್ಯಮ ಕಳೆಗುಂದುತ್ತದೆ. ಇಲ್ಲಿನ ಹೋಟೆಲುಗಳಲ್ಲಿ ಬಿಸಿನೆಸ್ ಕಡಿಮೆಯಾಗುತ್ತದೆ. ಆದ್ದರಿಂದ ಪ್ರವಾಸೋದ್ಯಮವನ್ನು ಸರಿದೂಗಿಸಲು ಪರಿಕರ್ ಸರಕಾರ ಇಂತಹ ನೂತನ ಪ್ರಯೋಗಕ್ಕೆ ಕೈಹಾಕಿದೆ.

ಇದರಿಂದ ಗೋವಾ ಆತಿಥ್ಯೋದ್ಯಮ ಸಹಜವಾಗಿಯೇ ಖುಷಿಗೊಂಡಿದೆ. ನಮ್ಮ ಸೇವೆಯನ್ನು ಮತ್ತಷ್ಟು ಆಕರ್ಷಮಯಗೊಳಿಸುತ್ತೇವೆ. May 1 to September 30 off-seasonನಲ್ಲಿ ಪ್ರವಾಸಿಗರು ಇನ್ನು ಗೋವಾ ಬೀಚುಗಳತ್ತ ದಾಂಗುಡಿಯಿಡುವುದು ಖಚಿತ ಎಂದು ಬೀಗುತ್ತಿದ್ದಾರೆ.

ಸುಮಾರು 1,500 ಹೋಟೆಲುಗಳು ಈ ತೆರಿಗೆ ರಿಯಾಯಿತಿಯನ್ನು ಪ್ರಾಮಾಣಿಕವಾಗಿ ಪ್ರವಾಸಿಗರಿಗೆ ವರ್ಗಾಯಿಸಲು ಕಟಿಬದ್ಧವಾಗಿವೆ. ಸೋ. ತಡವೇಕೆ ಈ ಬಾರಿ ಗೋವಾ ಪ್ರವಾಸಕ್ಕೆ ಈಗಿನಿಂದಲೇ ರೆಡಿಯಾಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+