ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಬ್ಯೂಟಿ ಪಾರ್ಲರ್‌ ಧರ್ಮಸಮ್ಮತವಲ್ಲ

By Srinath
|
Google Oneindia Kannada News

fatwa-against-beauty-parlours-muzaffarnagar
ಮುಜಾಫ‌ರ್‌ನಗರ (ಉತ್ತರಪ್ರದೇಶ), ಏ.5: ಮಸ್ಲಿಮರು ಬ್ಯೂಟಿ ಪಾರ್ಲರ್‌ ನಡೆಸುವುದು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಇದು ಇಸ್ಲಾಂ ಷರಿಯತ್‌ ಕಾನೂನಿಗೆ ವಿರೋಧವಾಗಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧಾರ್ಮಿಕ ಮಂಡಳಿ ದಾರುಲ್‌ ಉಲೂಮ್‌ ದೇವಬಂದ್‌, ಬ್ಯೂಟಿ ಪಾರ್ಲರ್‌ಗಳ ವಿರುದ್ಧ ಫ‌ತ್ವಾ ಹೊರಡಿಸಿದೆ.

ಇಸ್ಲಾಂ ಷರಿಯತ್‌ ಪ್ರಕಾರ ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವುದು ನ್ಯಾಯ ಹಾಗೂ ಧರ್ಮಸಮ್ಮತವೇ? ಎಂಬ ಪ್ರಶ್ನೆಗೆ ದಾರುಲ್‌ ಉಲೂಮ್‌ ಈ ಉತ್ತರ ನೀಡಿದೆ. ಮುಸ್ಲಿಂ ಮಹಿಳೆಯರು, ಬ್ಯೂಟಿಪಾರ್ಲರ್‌ಗಳನ್ನು ನಡೆಸುವ ವೃತ್ತಿಯನ್ನು ಕೈಗೊಳ್ಳಲು ಷರಿಯತ್‌ನಲ್ಲಿ ಅವಕಾಶವಿಲ್ಲ.

'ಪರ್ದಾ ನಿಯಮಾವಳಿಗಳಿಗೆ ವಿರುದ್ಧವಾಗಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಬ್ಯೂಟಿ ಪಾರ್ಲರ್‌ಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ' ಎಂದು ದಾರುಲ್‌ ಉಲೂಮ್‌-ದೇವಬಂದ್‌ನ ಮುಫ್ತಿ ಆರಿಫ್ ಹೇಳಿದ್ದಾರೆ.

English summary
Islamic seminary Darul Ulum Deoband in Muzaffarnagar has issued a fatwa against beauty parlours saying running such a place is against the Shariat Law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X