ವಿಮಾನಯಾನ ಟಿಕೆಟ್ ಕ್ಯಾನ್ಸಲ್ ರೇಟ್ ಏರಿಕೆ

ಏರ್ ಇಂಡಿಯಾ ಬಿಟ್ಟು ಉಳಿದ ವಿಮಾನಯಾನ ಸಂಸ್ಥೆಗಳ ಟಿಕೆಟ್ ಖರೀದಿಸಿದವರು ಟಿಕೆಟ್ ಕ್ಯಾನ್ಸಲ್ ಅಥವಾ ಪ್ರಯಾಣ ದಿನಾಂಕ ಬದಲು ಮಾಡಬೇಕಾದರೆ 200 ರು ನಿಂದ 900 ರು ತನಕ ತೆರಬೇಕಾಗುತ್ತದೆ.
ಏರ್ ಟಿಕೆಟ್ ದರ ಈಗಾಗಲೇ ಶೇ 5 ರಷ್ಟು ಏರಿಕೆ ಕಂಡಿರುವುದು ಪ್ರಯಾಣಿಕರಿಗೆ ಸಹಿಸಲು ಕಷ್ಟವಾಗಿದೆ. ಸೇವಾ ತೆರಿಗೆ ಹೊರೆಯ ಕಾರಣ ನೀಡಿ ಪ್ರಯಾಣ ದರ ಏರಿಸಲಾಗಿದೆ.
ಟ್ರಾವೆಂಟ್ ಏಜೆಂಟ್ ಗಳು ಎವಿಯೇಷನ್ ಟಬೈನ್ ಇಂಧನ ದರ ಏರಿಕೆ ನಂತರ ಟಿಕೆಟ್ ಬೆಲೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಟ್ರಾವೆಲ್ ಏಜೆಂಟ್ ಹೇಳುತ್ತಾರೆ.
ಸ್ಪೈಸ್ ಜೆಟ್, ಇಂಡಿಗೋ ಹಾಗೂ ಜೆಟ್ ಏರ್ ವೇಸ್ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಗೋ ಏರ್ ಪ್ರತಿನಿಧಿ ರಾಜ್ ಪ್ರತಿಕ್ರಿಯಿಸಿದ್ದು, 'ಟಿಕೆಟ್ ಕ್ಯಾನ್ಸಲ್ ರೇಟ್ ಏರಿಕೆ ಮಾಡಿರುವುದರಿಂದ ಹೆಚ್ಚಿನ ಆದಾಯ ಗಳಿಸಬಹುದು ಎಂಬುದನ್ನು ನಂಬುವಂತಿಲ್ಲ. ದರ ಏರಿಕೆಯಾದರೂ ಕೊನೆ ಗಳಿಗೆಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವವರು(ಬಿಸಿನೆಸ್ ಕ್ಲಾಸ್) ಬಹಳ ಮಂದಿ ಇದ್ದಾರೆ.
ಬಹುತೇಕ ಸಂದರ್ಭದಲ್ಲಿ ಟಿಕೆಟ್ ಕ್ಯಾನ್ಸಲ್ ಆದಾಗ, ಟಿಕೆಟ್ ಹಣ ಮರು ಪಾವತಿಸದೆ, ಮುಂದಿನ ಬಾರಿ ವಿಮಾನಯಾನಕ್ಕೆ ಟಿಕೆಟ್ ನೀಡುವ ಭರವಸೆ ಸಿಗುತ್ತದೆ. ಶೇ 90 ರಷ್ಟು ಸೀಟುಗಳು ಭರ್ತಿ ಆಗಿದ್ದರೆ ಮಾತ್ರ ಕ್ಯಾನ್ಸಲ್ ಆದ ಟಿಕೆಟ್ ಮಾರಲು ಸಾಧ್ಯ ಎಂದಿದ್ದಾರೆ.












Click it and Unblock the Notifications