ಲಾಡೆನ್ ಪತ್ನಿಯರನ್ನು ಸೆರೆಗೆ ದಬ್ಬಿದ ಪಾಕಿಸ್ತಾನ

ಲಾಡೆನ್ ಬಗ್ಗೆ ಸತ್ಯಗಳು ಹೊರಬೀಳಬಹುದು ಎಂಬ ಶಂಕೆಯಿಂದ ಲಾಡೆನ್ ನ ಮೂವರು ಹೆಂಡತಿಯರು ಮತ್ತು ಇಬ್ಬರು ಪುತ್ರಿಯರು ಪಾಕಿಸ್ತಾನದಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಆರೋಪಿಸಿ ಅವರಿಗೆ 45 ದಿನಗಳ ಜೈಲುವಾಸ ವಿಧಿಸಲಾಗಿದೆ.
ಶಿಕ್ಷೆ ಅನುಭವಿಸಿದ ಬಳಿಕ ಲಾಡೆನ್‌ನ ಕುಟುಂಬ ಸದಸ್ಯರನ್ನು ಅವರವರ ದೇಶಗಳಿಗೆ ಗಡಿಪಾರು ಮಾಡಲಾಗುವುದು ಎಂದು ವಕೀಲರೊಬ್ಬರು ಹೇಳಿದ್ದಾರೆ.
ಜೈಲು ಶಿಕ್ಷೆಯ ಜೊತೆಗೆ ಅವರಿಗೆ ತಲಾ 10,000 ರೂ. ದಂಡವನ್ನೂ ವಿಧಿಸಲಾಗಿದೆ. ದಂಡವನ್ನು ಸ್ಥಳದಲ್ಲೇ ಪಾವತಿಸಲಾಗಿದೆ.
ಲಾಡೆನ್‌ನ ಕುಟುಂಬ ಸದಸ್ಯರು ತಾವು ಪಾಕಿಸ್ತಾನದಲ್ಲಿ ಅಡಗಿರುವ ವಿವರಗಳನ್ನು ಬಹಿರಂಗಪಡಿಸದಂತೆ ಖಾತರಿಪಡಿಸಲು ಪಾಕಿಸ್ತಾನ ಸರಕಾರ ಅವರಿಗೆ ಹೆಚ್ಚಿನ ಅವಧಿಯ ಶಿಕ್ಷೆಯನ್ನು ಬಯಸಿತ್ತು.
ಕರಾಚಿಯಲ್ಲಿ ಲಾಡೆನ್ ನನ್ನು ಮದುವೆಯಾಗಿದ್ದ ಅಮಲ್ ಅಹ್ಮದ್ ಅಬ್ದುಲ್ ಫತೆ ಎಂಬ ಹೆಂಗಸು ನಂತರ ಗಡಿ ದಾಟಿ ಕಂದಹಾರ್ ನಲ್ಲಿ ಸಂಸಾರ ಹೂಡಿದ್ದಳು. ಈಗ ಸೆರೆಮನೆ ಅನುಭವಿಸುತ್ತಿದ್ದಾಳೆ.












Click it and Unblock the Notifications