ಭಯೋತ್ಪಾದಕ ಹಫೀಜಾ ತಲೆಗೆ $10 ದಶಲಕ್ಷ
ವಾಷಿಂಗ್ಟನ್,
ಏ.3: ಮುಂಬೈ ಸ್ಫೋಟದ (26/11) ರೂವಾರಿ ಲಷ್ಕರೆ ತಯ್ಯಬಾ ಸಂಘಟನೆಯ ಉಗ್ರ ಹಫೀಜಾ ಸಯೀದ್ ತಲೆಗೆ ಅಮೆರಿಕ ಸರಕಾರ 10 ದಶಲಕ್ಷ ಡಾಲರ್ ಮೊತ್ತ ಗೊತ್ತುಪಡಿಸಿದೆ. ಪ್ರಸ್ತುತ ಅವನು ಪಾಕಿಸ್ತಾನದಲ್ಲಿ ಸ್ವಚ್ಚಂದ ಹಕ್ಕಿಯಾಗಿ ಓಡಾಡಿಕೊಂಡಿದ್ದಾನೆ. id="toptextpromo">FBI
ಭಯೋತ್ಪಾದಕರ ಪಟ್ಟಿಯಲ್ಲಿ LeT ಉಗ್ರ ಹಫೀಜಾ ಹೆಸರು ದಾಖಲಾಗಿದ್ದು, ಅವನ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಹಫೀಜಾನ ಸಂಬಂಧಿ ಅಬ್ದುಲ್ ರಹಮಾನ್ ಮಕ್ಕಿ ತಲೆಯ ಮೇಲೂ 3 ದಶಲಕ್ಷ ಡಾಲರ್ ಬಹುಮಾನ ಇದೆ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ರಾಜಕೀಯ ವ್ಯವಹಾರಗಳ ಸಚಿವೆ ವೆಂಡಿ ಷೆರ್ಮನ್ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅತ್ಯುಗ್ರ
ಹಫೀಜಾ ಸಯೀದ್ ಮುಂಬೈ ಸ್ಫೋಟದ ರೂವಾರಿ. ಭಾರತಕ್ಕೆ ಅತ್ಯಗತ್ಯವಾಗಿ ಬೇಕಾದ ಉಗ್ರನಿವನು. 2009ರಲ್ಲಿ ಇವನಿಗೆ ಲಾಹೋರಿನಲ್ಲಿ ದಿಗ್ಬಂಧನ ವಿಧಿಸಲಾಗಿತ್ತು. ಆದರೆ ಅವನು ಪ್ರತಿನಿಧಿಸುತ್ತಿರುವ ಸಂಘಟನೆಯನ್ನು ( Jamaat-ud-Dawa -JuD) ಪಾಕಿಸ್ತಾನ ನಿಷೇಧಿಸಿಲ್ಲ ಎಂದು ಪಿಳ್ಳೆ ನೆವಕೊಟ್ಟ ಕೋರ್ಟ್ ಅವನನ್ನು ಬಂಧಮುಕ್ತಗೊಳಿಸಿದೆ.











Click it and Unblock the Notifications