ಜಗತ್ತಿನ ನಂ.1 ಜ್ಯುವೆಲ್ಲರಿ ಆಗುವಾಸೆ: ಮಲಬಾರ್ ಸಂಸ್ಥೆ

ಆಭರಣ ಮಳಿಗೆಗಳ ಸಂಖ್ಯೆಯನ್ನು 64ರಿಂದ 220 ಕ್ಕೇರಿಸಿಕೊಳ್ಳುವುದು, 3500 ಕೋ. ರೂ. ಹೂಡಿಕೆ, 15,000 ಉದ್ಯೋಗ ಸೃಷ್ಟಿಯೊಂದಿಗೆ ಜಗತ್ತಿನ ಪ್ರಮುಖ ಆಭರಣ ಬ್ರಾಂಡ್ ಆಗಿ ಮಲಬಾರ್ ಗೋಲ್ಡ್‌ನ್ನು ರೂಪಿಸಲು ಯೋಜಿಸಲಾಗಿದೆ.
ಹೆಸರು ಬದಲು: ಮಲಬಾರ್ ಗೋಲ್ಡ್‌ನ್ನು ಇನ್ಮುಂದೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಎನ್ನುವ ಹೊಸ ಹೆಸರಿನಿಂದ ಕರೆಯಲ್ಪಡುತ್ತದೆ ಎಂದು ಮಲಬಾರ್ ಗೋಲ್ಡ್ ಅಧ್ಯಕ್ಷ ಎಂಪಿ ಅಹ್ಮದ್ ಹೇಳಿದರು.
ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲೇ ಮಲಬಾರ್ ಗೋಲ್ಡ್ ಆಭರಣಗಳು ಲಭ್ಯವಾಗಲಿವೆ. ಖ್ಯಾತ ತಾರೆಯರಾದ ಪುನೀತ್ ರಾಜ್ ಕುಮಾರ್, ಅಕ್ಷಯ್ ಕುಮಾರ್, ವೆಂಕಟೇಶ್, ಮೋಹನ್ ಲಾಲ್ ಅವರನ್ನು ಬ್ರಾಂಡ್ ಅಂಬಾಸಿಡರ್ ಮಾಡಿಕೊಂಡಿದ್ದು ಮಲ್ ಬಾರ್ ಗೋಲ್ಡ್ ಸಂಸ್ಥೆಯನ್ನು ಇನ್ನಷ್ಟು ವಿಸ್ತರಲು ಸಹಾಯಕವಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದಕ್ಷಿಣ ಏಷ್ಯಾ, ಮಧ್ಯ ಪೂರ್ವದ ಇತರ ದೇಶಗಳು, ಯುರೋಪ್ ಮತ್ತು ಅಮೆರಿಕದಲ್ಲಿ ಮಲಬಾರ್ ಗೋಲ್ಡ್ ಮಳಿಗೆ ಪ್ರಾರಂಭವಾಗಲಿದೆ.












Click it and Unblock the Notifications