ಶಾಸಕರ ನಿವೃತ್ತಿ ವೇತನ 25 ಸಾವಿರ ರು.ಗೆ ಹೆಚ್ಚಳ ?

ವಿಧಾನಸಭೆಯಲ್ಲಿ 'ಕರ್ನಾಟಕ ವಿಧಾನಮಂಡಲದವರ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2012' ಅನ್ನು ಮಂಡಿಸಲಾಗಿದೆ.
ಶಾಸಕರ ನಿವೃತ್ತಿ ವೇತನದ ಗರಿಷ್ಠ ಮಿತಿಯನ್ನು 25 ಸಾವಿರ ರು.ಗಳಿಂದ 35 ಸಾವಿರ ರು.ಗಳಿಗೆ ಹೆಚ್ಚಿಸಲು ಪ್ರಸ್ತಾವಿಸಲಾಗಿದೆ.
ಅಲ್ಲದೆ, ತಿಂಗಳಿಗೆ ಎರಡು ಸಾವಿರ ರೂಪಾಯಿ ವೈದ್ಯಕೀಯ ಭತ್ಯೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ನಿವೃತ್ತಿ ವೇತನ ಸ್ವೀಕರಿಸುತ್ತಿರುವ ಮಾಜಿ ಶಾಸಕರಿಗೆ ದೇಶಾದ್ಯಂತ ರೇಲ್ವೆ ಪ್ರಯಾಣಕ್ಕಾಗಿ ವರ್ಷವೊಂದಕ್ಕೆ ಗರಿಷ್ಠ ಒಂದು ಲಕ್ಷ ರೂ.ಗಳ ವಾಸ್ತವಿಕ ಪ್ರಯಾಣ ವೆಚ್ಚಗಳ ಮರುಪಾವತಿ ಮಾಡಲಾಗುತ್ತದೆ ಎಂದು ತಿದ್ದುಪಡಿಯಾದ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಈ ತಿದ್ದುಪಡಿ ವಿಧೇಯಕದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17.43 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications