ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸರ್ಕಾರದ ಸಾಲದ ಮೊತ್ತ ಎಷ್ಟು ಗೊತ್ತಾ?

By Srinath
|
Google Oneindia Kannada News

karnatak-govt-debt-1-lakh-crore-rs-dvs
ಬೆಂಗಳೂರು, ಮಾ.28: ಒಂದು ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿರುವ ರಾಜ್ಯ ಸರ್ಕಾರ ಸರಿಸುಮಾರು ಅಷ್ಟೇ ಮೊತ್ತದ ಋಣವನ್ನೂ ಹೊಂದಿದೆ. ಈ ಋಣಕ್ಕೆ ಪ್ರತಿವರ್ಷ ಆರು ಸಾವಿರ ಕೋಟಿ ರೂ. ಬಡ್ಡಿ ಪಾವತಿ ಮಾಡುತ್ತಿದೆ. ಅಷ್ಟೇ ಅಲ್ಲ ಮುಂದಿನ ಸಾಲಿನ ಅಂತ್ಯಕ್ಕೆ ಈ ಸಾಲದ ಪ್ರಮಾಣ 1,14,745 ಕೋಟಿ ರೂ. ದಾಟಲಿದೆ.

ಇದರಿಂದ ರಾಜ್ಯದ ಪ್ರತಿ ಪ್ರಜೆಯೂ ಹೊರಬೇಕಾದ ಸಾಲದ ಮೊತ್ತ ಕೇವಲ 16,555 ರೂ. ಈ ಆತಂಕಕಾರಿ ಮಾಹಿತಿಯನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ವಿಧಾನಸಭೆಗೆ ಮಂಗಳವಾರ ನೀಡಿದ್ದಾರೆ. ಅವರ ಪ್ರಕಾರ ರಾಜ್ಯವು ಹೊಂದಿರುವ ಸಾಲದ ಪ್ರಮಾಣ 99,312 ಕೋಟಿ ರೂ. ಅಷ್ಟೇ ಅಲ್ಲ, 2012-13 ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಸಾಲದ ಪ್ರಮಾಣ 1,14,745 ಕೋಟಿ ರೂ. ದಾಟುವ ನಿರೀಕ್ಷೆಯಿದೆ. ಇಷ್ಟಾದರೂ ವಿತ್ತೀಯ ಶಿಸ್ತುಪಾಲಿಸುತ್ತಿರುವ ಸರ್ಕಾರ ಸಾಲ ಪಡೆಯುವಲ್ಲಿ ತನ್ನ ಮಿತಿಯನ್ನು ಮೀರಿಲ್ಲ.

ರೋಜ್ಯದ ಸಮಗ್ರ ಉತ್ಪನ್ನದ (GSDP) ಶೇ. 25 ರಷ್ಟು ಸಾಲ ಪಡೆಯಬಹುದಾಗಿದೆ. ಆದರೆ ಸರ್ಕಾರ ಶೇ. 22.87ರಷ್ಟು ಮಾತ್ರ ಸಾಲ ಪಡೆದಿದೆ ಎಂಬ ಸಮಾಧಾನವೂ ಇದೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಸಿ.ಎಸ್‌. ನಾಡಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸಾಲ ಮರುಪಾವತಿಗಾಗಿ ವಾರ್ಷಿಕ 8056 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ 6 ಸಾವಿರ ಕೋಟಿ ರೂ. ಬಡ್ಡಿ ಹಾಗೂ 2056 ಕೋಟಿ ರೂ. ಅಸಲು ಎಂದು ವಿವರಿಸಿದರು.

20011-12 ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ರಾಜ್ಯ ಸರ್ಕಾರದ ಯೋಜನಾ ವೆಚ್ಚ 19,723.94 ಕೋಟಿ ರೂ.ಗಳಾಗಿದ್ದು ಯೋಜನೇತರ ವೆಚ್ಚ 36,495.53 ಕೋಟಿ ರೂ.ಗಳು ಎಂದು ತಿಳಿಸಿದರು.

English summary
Karnataka CM Sadananda Gowda on Tuesday informed the Assembly that the total liabilities in 2011-12 are estimated to be Rs 1.02 lakh crore, while the outstanding debt is estimated to be Rs 99,312 crore (both revised estimates). The chief minister was replying to a question by Congress member Appaji Nadagouda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X