ಸ್ವಿಸ್ ಖಾತೆದಾರರ ಹೆಸರು ಗುಪ್ತ, ತೆರಿಗೆ ಮಾತ್ರ ಚುಕ್ತಾ

ಕಪ್ಪು ಹಣದ ಮಾಹಿತಿ ಕುರಿತು ಲೋಕಸಭಾ ಅಧಿವೇಶನದಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ಮೂಲಕ ಹೇಳಿಕೆ ನೀಡಿದ ಪ್ರಣಬ್ ಮುಖರ್ಜಿ ಹೆಚ್ಚಿನ ವಿಷಯವನ್ನು ನೀಡಲಿಲ್ಲ.
ಸರ್ಕಾರವು ದ್ವಿತೆರಿಗೆ ತಡೆ ಒಡಂಬಡಿಕೆ ಅಡಿ(Double Taxation Avoidance Convention)ಯಲ್ಲಿ ಫ್ರಾನ್ಸ್ ಮತ್ತು ಜರ್ಮನ್ ದೇಶಗಳಿಂದ ಮಾಹಿತಿಯನ್ನು ಪಡೆದುಕೊಂಡಿದೆ ಎಂದು ಮುಖರ್ಜಿ ಹೇಳಿದರು.
ತೆರಿಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರಿಗೆ ದಂಡ ವಿಧಿಸುವುದರ ಜೊತೆಗೆ ಪ್ರಾಸಿಕ್ಯೂಶನ್ ಅವರ ಮೇಲೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ ಸಚಿವರು ಒಟ್ಟು 18 ಪ್ರತ್ಯೇಕ ಪ್ರಕರಣಗಳ ವಿರುದ್ಧ ತೆರಿಗೆ ವಿಧಿಸಲಾಗಿದೆ ಎಂದು ಮುಖರ್ಜಿ ಹೇಳಿದರು.(ಪಿಟಿಐ)












Click it and Unblock the Notifications