ಹಿಂದೂ ಮಹಿಳೆಯರಿಗೆ ವಿವಾಹ ವಿಚ್ಛೇದನ ಇನ್ನು ಬಹು ಸುಲಭ

ಕರಡು ಮಸೂದೆ ಸಂಪುಟದಲ್ಲಿ ಅನುಮೋದನೆ ಪಡೆದು, ಸಂಸತ್ತಿನಲ್ಲಿ ಮಂಡನೆಯಾಗಿ ಒಪ್ಪಿಗೆಯಾದರೆ ಆ ಬಳಿಕ ವಿಚ್ಛೇದನ ಅತ್ಯಂತ ಸರಳವಾಗಲಿದೆ. ಅಲ್ಲದೆ ವಿಚ್ಛೇದನ ಪಡೆಯುವ ಮಹಿಳೆಯರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಿದೆ.
ಕರಡು ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
1. ವಿವಾಹ ನಂತರ ಗಳಿಸಿದ ಆಸ್ತಿಯಲ್ಲಿ ವಿಚ್ಛೇದಿತ ಮಹಿಳೆಗೂ ಸಮಪಾಲು.
2. ದತ್ತು ಮಕ್ಕಳಿಗೂ ಸ್ವಂತ ಮಕ್ಕಳಷ್ಟೇ ಹಕ್ಕು.
3. ಗಂಡ ಹೆಂಡತಿ ಬೇರಾಗಲು ಬಯಸಿದರೆ ಕಾಲಾವಕಾಶ ಸಂಪೂರ್ಣ ಮನ್ನಾ ಮಾಡಿ ಕೂಡಲೇ ವಿಚ್ಛೇದನ.
4. ಗಂಡ ಸಂಬಂಧ ಮುಂದುವರಿಸಲು ಸಾಧ್ಯವಿಲ್ಲ ಎಂದು ಅರ್ಜಿ ಸಲ್ಲಿಸಿದರೆ, ಅದನ್ನು ವಿರೋಧಿಸುವ ಹಕ್ಕು ಹೆಂಡತಿಗೆ.
5. ವಿಚ್ಛೇದನ ಬಳಿಕ ಗಂಡ ತನ್ನ ಸ್ಥಿರಾಸ್ತಿಯನ್ನು ತನ್ನ ಬಳಿ ಇಟ್ಟುಕೊಳ್ಳಲು ನಿರ್ಧರಿಸಿದರೆ, ಅದಕ್ಕೆ ಬದಲಾಗಿ ಹೆಂಡತಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ನಿರ್ಧರಿಸುವ ಹಕ್ಕು ಸ್ಥಳೀಯ ನ್ಯಾಯಾಲಯಗಳಿಗೆ.












Click it and Unblock the Notifications