ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಪಿಯೂ ಫಿಸಿಕ್ಸ್ ಪರೀಕ್ಷೆ ಮಾ.27ಕ್ಕೆ ಮುಂದೂಡಿಕೆ

By Mahesh
|
Google Oneindia Kannada News

Karnataka 2nd PU Maths Paper Leaked
ಬೆಂಗಳೂರು, ಮಾ.22: ದ್ವೀತಿಯ ಪಿಯುಸಿ ಗಣಿತ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್ ಆದ ಬೆನ್ನಲ್ಲೇ ವಿಜ್ಞಾನ ಪರೀಕ್ಷೆ ಪ್ರಶ್ನೆ ಪತ್ರಿಕೆ ಕೂಡಾ ರಾತ್ರೋರಾತ್ರಿ ಲೀಕ್ ಆಗಿದೆ. ಮಾ.27ಕ್ಕೆ ಪರೀಕ್ಷೆ ಮುಂದೂಡಲಾಗಿದೆ ಎಂದು ಪರೀಕ್ಷಾ ಮಂಡಳಿ ಆಯುಕ್ತೆ ರಶ್ಮಿ ಹೇಳಿದ್ದಾರೆ.

ಈ ಸಂಬಂಧ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಉಪನ್ಯಾಸಕ ವೆಂಕಟೇಶ್ ಎಂಬುವವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕೆಲವು ಜೆರಾಕ್ಸ್ ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ.

ಪದವಿ ಪೂರ್ವ ಪರೀಕ್ಷಾ ಮಂಡಳಿ ತುರ್ತು ಸಭೆ ನಡೆಸಿದ್ದು, ಮುಂದಿನ ಕ್ರಮದ ಬಗ್ಗೆ ಚರ್ಚಿಸುತ್ತಿದ್ದಾರೆ.

ಗಣಿತ ಪರೀಕ್ಷೆಯನ್ನು ಏ. 3ರಂದು ನಡೆಸಲಾಗುತ್ತಿದೆ. ಆದರೆ, ವಿಜ್ಞಾನ ಪರೀಕ್ಷೆ ಮುಂದೂಡಲಾಗಿದೆ. ಇನ್ನೂ ದಿನಾಂಕ ನಿಗದಿಪಡಿಸಿಲ್ಲ ಎಂದು ಪದವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಆಯುಕ್ತೆ ರಶ್ಮಿ ವಿ ಮಹೇಶ್ ಹೇಳಿದ್ದಾರೆ.

ಮಾ.15 ರಿಂದ 30ರ ವರೆಗೆ ಪಿಯೂ ಪರೀಕ್ಷೆ ನಡೆಯುತ್ತಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.[ವೇಳಾಪಟ್ಟಿ ನೋಡಿ]

ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ.ಆದರೂ ಪದೇ ಪದೇ ಪತ್ರಿಕೆ ಲೀಕ್ ಆಗುತ್ತಿರುವುದಕ್ಕೆ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Karnataka 2nd PU Science (Physics) Question paper also Paper leaked. The Board will decide the date of Physics examination date later today (Mar.22) says PU director Rashmi V Mahesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X